Saturday, June 3, 2023
Homeಕರಾವಳಿಎಲ್ಲಿಯೂ ವಾಸಿಯಾಗದ ಖಾಯಿಲೆಗೆ ಸಿಗುತ್ತೆ ಇಲ್ಲಿ ಪರಿಹಾರ…!!!

ಎಲ್ಲಿಯೂ ವಾಸಿಯಾಗದ ಖಾಯಿಲೆಗೆ ಸಿಗುತ್ತೆ ಇಲ್ಲಿ ಪರಿಹಾರ…!!!

- Advertisement -


Renault

Renault
Renault

- Advertisement -

ಎಲ್ಲಿಯೂ ವಾಸಿಯಾಗದ ಖಾಯಿಲೆಗೆ ಸಿಗುತ್ತೆ ಇಲ್ಲಿ ಪರಿಹಾರ…!!!

ಇದು ಗೋಳಿಯಂಗಡಿಯ ನಾಟಿವೈದ್ಯೆಯ ಚಮತ್ಕಾರ…!!!

ಉಡುಪಿ: ಈ ಮನೆ ನೋಡಿ ಬೆರಗಾಗಿ ಹೋಗಿದ್ದೆ. ಏನಿಲ್ಲವೆಂದರೂ ಅರ್ಧ ಎಕರೆಯಲ್ಲಿದೆ ಈ ಮನೆ..!
ಈಗ ಒಂದೂವರೆ ವರ್ಷದ ಹಿಂದೆ ನಮ್ಮ ಹುಡುಗ ನವೀನನಿಗೆ ಜಾಂಡೀಸ್ ಆಗಿತ್ತು.

ಆಸ್ಪತ್ರೆಯ ಔಷಧಿಗಳು ಕಾಯಿಲೆಯನ್ನು ವಾಸಿಮಾಡದೇ ಉಲ್ಬಣಗೊಂಡಾಗ ಯಾರೋ ಈ ಮೊದಲೇ ಔಷಧಿ ತೆಗೆದುಕೊಂಡು ಸಂಪೂರ್ಣ ಗುಣ ಹೊಂದಿದ್ದವರೊಬ್ಬರು ಕೊಟ್ಟ ವಿಳಾಸ ಹಿಡಿದು ನಾಟಿ ವೈದ್ಯ ರವಿ ಹೆಗ್ಗಡೆಯವರ ಮನೆ ಹುಡುಕುತ್ತಾ ಹೊರಟೆವು. ಉಡುಪಿಯ ಬ್ರಹ್ಮಾವರದಿಂದ ಇಪ್ಪತ್ತೈದು-ಮೂವತ್ತು ಕಿಲೋಮೀಟರು ದೂರದ ಊರದು. ಶ್ರೀ ಕ್ಷೇತ್ರ ಮಂದಾರ್ತಿಯನ್ನು ದಾಟಿ ಹೋಗಬೇಕು. ಹಿಲಿಯಾಣ ಅನ್ನೋ ಊರಿನ ಗೋಳಿಯಂಗಡಿ ಎಂಬಲ್ಲಿಗೆ ಹೋಗಬೇಕಿತ್ತು. ಹಿಲಿಯಾಣದಲ್ಲಿಳಿದು ಆಟೊದಲ್ಲಿ ಆ ಮನೆಯ ಹತ್ತಿರ ಹೋಗಿಳಿದರೆ ನನಗೊಮ್ಮೆ ದಾರಿ ತಪ್ಪಿ ಝೂ ಗೇನಾದ್ರೂ ಬಂದ್ವಾ..!? ಅಂತಾ ಅನುಮಾನವಾಯಿತು. ಇಡೀ ಊರಿಗೆ ಒಂದೇ ಮನೆ, ಸುತ್ತಾ ಕಾಡು, ಹಾಳು ಬಿದ್ದ ಗದ್ದೆಗಳು. ಮುಂಗಸಿ, ಮೊಲ, ನವಿಲುಗಳು ಎಲ್ಲೆಂದರಲ್ಲಿ ಓಡಾಡುತ್ತಿವೆ.!
ಸಣ್ಣ ಉಣುಗೋಲಿನ ಗೇಟು ದಾಟಿ ಒಳಹೋದರೆ ಈ ನೂರಾರು ವರ್ಷ ಹಳೆಯದಾದ ಬೃಹದಾಕಾರದ ಮನೆ. ಹಿಂದಿನ ಭಾಗ ಬಿದ್ದು ಹೋಗಿದೆ. ಎರಡು ಬಾರಿ ಕರೆದ ನಂತರ ಒಳಗಿನಿಂದ ” ಹೋಯ್ ಏರು..? ಬತ್ತೆ…” ಅನ್ನೋ ಹೆಣ್ಣು ಧ್ವನಿಯೊಂದು ಕೇಳಿಸಿತು. ಹೊರ ಬಂದ ಹೆಣ್ಣುಮಗಳೊಬ್ಬರು ನಮ್ಮ ವಿಷ್ಯ ಕೇಳಿ ‘ಓ.. ತಂದೆ ತೀರಿ ಹೋಗಿ ಆರು ತಿಂಗಳಾಯ್ತು, ನಾನೇ ಔಷಧಿ ಕೊಡ್ತೀನಿ..’ ಅಂದರು. ಸರಿ, ಮೂಗಿಗೆ ಅದೇನೊ ರಸ ಹಾಕಿ ರಾತ್ರಿಯೊಳಗೆ ಮನೆ ಸೇರಿಕೊಳ್ಳಿ ರಾತ್ರಿಯಿಡೀ ಮೂಗಿನಿಂದ ಹಳದಿ ಬಣ್ಣದ ಸಿಂಬಳ ಹೋಗುತ್ತದೆ. ಹಾಗೆಯೇ ಎರಡು ದಿನ ಬಿಟ್ಟು ಈ ರಸವನ್ನ ಕುಡೀರಿ, ಒಂದು ತಿಂಗಳ ನಂತರ ಇನ್ನೊಮ್ಮೆ ಬನ್ನಿ ಅಂದರು.
ಎರಡು ತಿಂಗಳು ಕಳೆಯುವಷ್ಟರಲ್ಲಿ ಯಾವ್ಯಾವುದೋ ಆಸ್ಪತ್ರೆ ತಿರುಗಿದರೂ ಗುಣವಾಗದ, ದಿನೇ ದಿನೆ ಜಾಸ್ತಿ ಯಾಗುತ್ತಿದ್ದ ಜಾಂಡೀಸ್ ಮಾಯವಾಗಿತ್ತು.!

ನಿಮಗ್ಯಾರಿಗಾದರೂ ಜಾಂಡೀಸಿಗೆ ನಾಟಿ ಔಷಧಿ ಬೇಕಿದ್ದಲ್ಲಿ ಅಲ್ಲಿಗೊಮ್ಮೆ ಹೋಗಬಹುದು.

ವಿಳಾಸ: ಶರ್ಮಿಳಾ ಹೆಗ್ಡೆ
ಗೋಳಿಯಂಗಡಿ, ಹಿಲಿಯಾಣ(ಅಂಚೆ)
ಮಂದಾರ್ತಿ, ಬ್ರಹ್ಮಾವರ, ಉಡುಪಿ.
ಮೊ: 9480402606

ಕೃಪೆ :@ #WTN
Raghu Poojary

- Advertisement -

LEAVE A REPLY

Please enter your comment!
Please enter your name here

Most Popular

Recent Comments