
ಮಂಗಳೂರು: ಹೈಲೈಟ್ ಲೈಟಿಂಗ್ ಸ್ಟುಡಿಯೋ ಇದರ ಏಳನೇ ಶೋರುಂ ಮಂಗಳೂರಿನ ಕಂಕನಾಡಿಯ ಲಿಲಿಯ ಆರ್ಕೆಡ್ ಕಟ್ಟಡದಲ್ಲಿ ಶುಭಾರಂಭಗೊಂಡಿತು.

ನೂತನ ಶೋರುಂ ಗೆ ಹೈಲೈಟ್ ಲೈಟಿಂಗ್ ಸ್ಟುಡಿಯೋ ಇದರ ಮುಖ್ಯಸ್ಥರ ಕುಟುಂಬದ ಮಕ್ಕಳು ಸೇರಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದ್ರು.

ಕಾರ್ಯಕ್ರಮಕ್ಕೆ ಉಳ್ಳಾಲ ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾದ ಉಸ್ಮಾನ್ ಫೈಝಿ, ದುಆ ನೆರವೇರಿಸಿ ಚಾಲನೆ ನೀಡಿದರು.

ಈ ವೇಳೆ ಸಂಸ್ಥೆಯ ನಿರ್ದೇಶಕ ಮೊಹಮ್ಮದ್ ಇಕ್ಬಾಲ್ ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದು, ಇದು ನಮ್ಮ ಏಳನೇ ಮಳಿಗೆಯಾಗಿದೆ. ಮನೆ, ಕಚೇರಿಗಳನ್ನು ಬೆಳಕಿನಿಂದ ಶೃಂಗಾರಗೊಳಿಸಲು ಅತ್ಯಾಧುನಿಕ ಗುಣಮಟ್ಟದ ಲೈಟಿಂಗ್ಸ್ ವ್ಯವಸ್ಥೆಗಳಿದ್ದು ಸಂಸ್ಥೆಯು ಜಿಲ್ಲೆಯಲ್ಲಿ ಇನ್ನಷ್ಟು ಅಂಗ ಸಂಸ್ಥೆ ತೆರೆಯುವ ಉದ್ದೇಶ ಹೊಂದಿದೆ ಎಂದವರು ಹೇಳಿದರು.


ಕಾರ್ಯಕ್ರಮದಲ್ಲಿಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಮುಮ್ತಾಝ್ ಆಲಿ. ಲಿಲಿಯಾ ಆರ್ಕೇಡ್‌ನ ಮಾಲಕ ಜೋಸೆಫ್, ಮಳಿಗೆಯ ಪಾಲುದಾರ ಇಬ್ರಾಹಿಂ ಮೊಹಮ್ಮದ್, ಯೂಸುಫ್ ಬೆಂಗಳೂರು, ಮೊಹಮ್ಮದ್ ರಶೀದ್, ಉದ್ಯಮಿ ಹಮೀದ್, ಗ್ಲೋಬಲ್ ಅಕಾಡಮಿಯ ನಿರ್ದೇಶಕ ರಝಾಕ್, ಸೌಜನ್ಯ ಹೆಗ್ಡೆ, ಸಾಹಿಲ್ ಝಹೀರ್, ಎಲೆಕ್ರ್ಟಾ ಗ್ರೂಪ್‌ನ ನಿರ್ದೇಶಕ ಕಿರಣ್ ಮಧ್ಯನ್ ಮತ್ತಿತರರು ಉಪಸ್ಥಿತರಿದ್ದರು.

