ಬೆಂಗಳೂರು: ಶೃಂಗೇರಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಮತ್ತು ಇದು ಇಡೀ ಸಮಾಜಕ್ಕೆ ಒಂದು ಪಾಠವಾಗಬೇಕು. ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆಯಾಗುವವರೆಗೂ ವಿರಮಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ನಿಯಮ 68ರ ಅಡಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರ ಕ್ರಷರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ವಿಪಕ್ಷ ನಾಯಕ ಎಸ್. ಆರ್.ಪಾಟೀಲ್, ವಿಪಕ್ಷ ಮುಖ್ಯ ಸಚೇತಕ ಎಂ. ನಾರಾಯಣ ಸ್ವಾಮಿ ಮೊದಲಾದವರು ಪ್ರಸ್ತಾವಿಸಿರುವ ವಿಷಯಕ್ಕೆ ಗೃಹ ಸಚಿವರು ಉತ್ತರಿಸಿ, ಪ್ರಕರಣದ ತನಿಖೆಗೆ 4 ತಂಡಗಳನ್ನು ಮಾಡಲಾಗಿದೆ. ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಯಾವೆಲ್ಲ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಬೇಕೋ ಅವೆಲ್ಲವನ್ನು ಮಾಡಿ, ಗಲ್ಲು ಶಿಕ್ಷೆಗೆ ಬೇಕಾದ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ.
ಪೊಲೀಸ್ ಅಧಿಕಾರಿಗಳ ಲೋಪದ ತನಿಖೆಯೂ ಆಗಲಿದೆ ಎಂದರು.