Sunday, May 28, 2023
Homeಕ್ರೈಂಬಿಜೆಪಿ ಮುಖಂಡ ಕಮ್ ಚಿನ್ನದ ಉದ್ಯಮಿಯ ಹನಿಟ್ರ್ಯಾಪ್​ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

ಬಿಜೆಪಿ ಮುಖಂಡ ಕಮ್ ಚಿನ್ನದ ಉದ್ಯಮಿಯ ಹನಿಟ್ರ್ಯಾಪ್​ ಪ್ರಕರಣ : ಮತ್ತೋರ್ವ ಆರೋಪಿಯ ಬಂಧನ

- Advertisement -


Renault

Renault
Renault

- Advertisement -

ಮೈಸೂರಿನ ದರ್ಶನ್ ಪ್ಯಾಲೇಸ್​ನಲ್ಲಿ ಜಗನ್ನಾಥ ಶೆಟ್ಟಿಯನ್ನ ಗ್ಯಾಂಗ್ ಲಾಕ್ ಮಾಡಿತ್ತು. ಸಲ್ಮಾ ಎಂಡ್ ಗ್ಯಾಂಗ್ ಪೊಲೀಸರ ಕೈಗೆ ಲಾಕ್ ಆಗ್ತಾಯಿದ್ದಂತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಜಯಸಿಂಹ ತಲೆ ಮರೆಸಿಕೊಂಡಿದ್ದ.

ಮಂಡ್ಯಬಿಜೆಪಿ ಮುಖಂಡ ಕಮ್ ಚಿನ್ನದ ಉದ್ಯಮಿಯ ಹನಿಟ್ರ್ಯಾಪ್​ ಪ್ರಕರಣ ಸಂಬಂಧ ಮತ್ತೋರ್ವ ಆರೋಪಿಯನ್ನು ಮಂಡ್ಯ ( Mandya ) ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಾಡ್ಜ್​​ನಲ್ಲಿ ಚಿತ್ರೀಕರಣ ಮಾಡಿದ್ದ ಜಯಸಿಂಹ ಅರೆಸ್ಟ್ ಆದ ವ್ಯಕ್ತಿ. ಪ್ರಕರಣದಲ್ಲಿ ಈವರೆಗೆ ಒಟ್ಟು ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ. ಮೈಸೂರಿನ ದರ್ಶನ್ ಪ್ಯಾಲೇಸ್​ನಲ್ಲಿ ಜಗನ್ನಾಥ ಶೆಟ್ಟಿಯನ್ನ ಗ್ಯಾಂಗ್ ಲಾಕ್ ಮಾಡಿತ್ತು. ಸಲ್ಮಾ ಎಂಡ್ ಗ್ಯಾಂಗ್ ಪೊಲೀಸರ ಕೈಗೆ ಲಾಕ್ ಆಗ್ತಾಯಿದ್ದಂತೆ ಬೆಂಗಳೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಜಯಸಿಂಹ ತಲೆ ಮರೆಸಿಕೊಂಡಿದ್ದ. ಪ್ರಕರಣ ದಾಖಲಾಗಿ ಮೂರು ವಾರಗಳ ಬಳಿಕ ಪೊಲೀಸರ ಕೈಗೆ ಆರೋಪಿ ಲಾಕ್ ಆಗಿದ್ದಾನೆ.

ಟವರ್ ಲೊಕೇಷನ್ ಸಿಗಬಾರದೆಂದು ಮೊಬೈಲ್ ಬಳಸದೆ ಓಡಾಟ ನಡೆಸಿದ್ದ. ಒಂದೊಂದು ದಿನ ಒಂದೊಂದು ಊರಿಗೆ ತೆರಳುತ್ತಿದ್ದ. ಕೈಯಲ್ಲಿದ್ದ ಕಾಸು ಖಾಲಿ ಆದ್ಮೇಲೆ ಆರೋಪಿ ಪೊಲೀಸರ ಕೈಗೆ ತಗಲಾಕಿಕೊಂಡಿದ್ದಾನೆ. ಸದ್ಯ ಶೆಟ್ರ ಹನಿ ಟ್ರ್ಯಾಪ್ ಪ್ರಕರಣ ಸಂಬಂದ ನಾಲ್ಕನೆ ಆರೋಪಿ ಬಂಧನವಾಗಿದ್ದು, ಆರೋಪಿಯನ್ನ ಬಂಧಿಸಿ ಪಶ್ಚಿಮ ಠಾಣಾ ಪೊಲೀಸರು ಡ್ರಿಲ್ ನಡೆಸುತ್ತಿದ್ದಾರೆ.

ಯುವತಿ ಜೊತೆ ರೆಡ್​ ಹ್ಯಾಂಡಾಗಿ ಸಿಕ್ಕಿ ಬಿದ್ರಾ ಜಗನ್ನಾಥ್ ಶೆಟ್ಟಿ..?

ಬಿಜೆಪಿ ಮುಖಂಡನ ಹನಿ ಟ್ರ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, FIRನಲ್ಲಿ ಉಲ್ಲೇಖಿಸಿದ ಅಂಶವೇ ಬೇರೆ ಅಸಲಿಗೆ ನಡೆದಿದ್ದೆ ಬೇರೆ. ಕೃತ್ಯ ನಡೆದ ದಿನದ ಎಕ್ಸ್​​ಕ್ಲೂಸಿವ್ ವಿಡಿಯೋ ಸಿಕ್ಕಿದೆ. ಮೈಸೂರಿನ ದರ್ಶನ್ ಲಾಡ್ಜ್​​ಗೆ ಏಕಾಏಕಿ ಸಲ್ಮಾ ಗ್ಯಾಂಗ್ ನುಗ್ಗಿದ್ದು, ಯುವತಿ ಜೊತೆ ರೆಡ್​ ಹ್ಯಾಂಡಾಗಿ ಚಿನ್ನದ ವ್ಯಾಪಾರಿ ಕಂ ಬಿಜೆಪಿ ಮುಖಂಡ ಜಗನ್ನಾಥ್ ಶೆಟ್ಟಿ ಸಿಕ್ಕಿಬಿದ್ದಿದ್ದಾರೆ. ಕಾಲೇಜ್ ಲೆಕ್ಚರರ್ ಎಂದು ಲಾಡ್ಜ್​​ನಲ್ಲಿದ್ದು, ಯುವತಿ ಜೊತೆ ಜಗನ್ನಾಥ ಇರುವ ವಿಚಾರ ತಿಳಿದು ಅಲರ್ಟ್ ಆದ ಸಲ್ಮಾ ಗ್ಯಾಂಗ್​​ ತಕ್ಷಣ ಮೈಸೂರಿನ ದರ್ಶನ್ ಲಾಡ್ಜ್​ಗೆ ನುಗ್ಗಿದ್ದಾರೆ.

ಒಳ ನುಗ್ಗುತ್ತಿದ್ದಂತೆ ಗ್ಯಾಂಗ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಯುವತಿ, ಜಗನ್ನಾಥ ಶೆಟ್ಟಿಗೆ ಮನಬಂದಂತೆ ಥಳಿಸಿದ್ದಾರೆ. ಸದ್ಯ ಜಗನ್ನಾಥ ಶೆಟ್ಟಿ ನಡೆ ಹಲವು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೂವರು ಆರೋಪಿಗಳನ್ನು ಪೊಲೀಸರು ಜೈಲಿಗಟ್ಟಿದ್ದು, ಮಂಡ್ಯ ಪಶ್ಚಿಮ ವಿಭಾಗ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

- Advertisement -

1 COMMENT

  1. ಇದು ಬಿಜೆಪಿಗರಿಗೆ ಹೊಸದೇನಲ್ಲ , ಬಿಜೆಪಿಯ ಮುಖಂಡರುಗಳು ಆಗಾಗ ಈ ಕೇಸಿನಲ್ಲಿ ಸಿಕ್ಕಾಕಿಕೊಳ್ಳುವುದು ಮಾಮೂಲಿ…. ಹಾಗೆಯೇ ಈ ಶೆಟ್ರು ಕೂಡ.

LEAVE A REPLY

Please enter your comment!
Please enter your name here

Most Popular

Recent Comments