Tuesday, September 28, 2021
Homeಕರಾವಳಿಪಾರ್ಟಿಯ ನೆಪದಲ್ಲಿ ಯುವಕ ಹನಿಟ್ರಾಪ್ ಬಲೆಗೆ…ದೂರು ನೀಡಿದ ನಂತರ ಇಬ್ಬರು ಆರೋಪಿಗಳ ಬಂಧನ…

ಪಾರ್ಟಿಯ ನೆಪದಲ್ಲಿ ಯುವಕ ಹನಿಟ್ರಾಪ್ ಬಲೆಗೆ…ದೂರು ನೀಡಿದ ನಂತರ ಇಬ್ಬರು ಆರೋಪಿಗಳ ಬಂಧನ…

- Advertisement -
Renault
- Advertisement -
Home Plus
- Advertisement -

ಮಂಗಳೂರು : ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಹನಿಟ್ರ್ಯಾಪ್ ಗೊಳಪಡಿಸಿದ ಪ್ರಕರಣಕ್ಕೆ ಸಂಬಂಧಿಸಿ ಮಹಿಳೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಉಳ್ಳಾಲದ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಮಹಿಳೆ ಮತ್ತು ಆಕೆಯ ಸ್ನೇಹಿತ ಪಕ್ಕದ ಮನೆಯ ವ್ಯಕ್ತಿಯೊಬ್ಬರನ್ನು ಪಾರ್ಟಿಯ ನೆಪದಲ್ಲಿ ಮದ್ಯದ ಜತೆ ಅಮಲು ಪದಾರ್ಥ ಬೆರೆಸಿ ಕುಡಿಸಿ ಅವರನ್ನು ವಿವಸ್ತ್ರಗೊಳಿಸಿ ವೀಡಿಯೋ ಮಾಡಿ ಮನೆಯಿಂದ 2.15 ಲಕ್ಷ ರುಪಾಯಿ ಹಾಗೂ ಉಂಗುರವನ್ನು ಕಳವು ಮಾಡಿ ಹನಿಟ್ರ್ಯಾಪ್ ಗೊಳಪಡಿಸಿರುವ ಬಗ್ಗೆ ದೂರು ದಾಖಲಿಸಲಾಗಿತ್ತು. ಈ ಬಗ್ಗೆ ಉಳ್ಳಾಲ ಪೊಲೀಸರು ತನಿಖೆ ನಡೆಸಿ ಅಝ್ವೀನ್.ಸಿ (24) ಹಾಗೂ ಬೈಕಂಪಾಡಿ ಜೋಕಟ್ಟೆಯ ಕೆಬಿಎಸ್ ಬೊಟ್ಟು ಹೌಸ್ ನಿವಾಸಿ ಹತೀಜಮ್ಮ ಅಲಿಯಾಸ್ ಸಫ್ನಾ (23) ರವರನ್ನು ಬಂಧಿಸಲಾಗಿದೆ.

ಈ ಜೋಡಿ ಮಂಗಳೂರಿನ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪ್ಲ್ಯಾಟ್ ವೊಂದರಲ್ಲಿ ವಾಸವಾಗಿದ್ದಾರೆ. ಮದುವೆಯಾಗದ ಈ ಜೋಡಿ ಹನಿಟ್ರ್ಯಾಪ್ ಮಾಡಲೆಂದೆ ಪ್ಲ್ಯಾನ್ ಮಾಡಿ ಈ ಮನೆಯಲ್ಲಿ ವಾಸವಾಗಿದೆ. ಇವರ ಪಕ್ಕದ ಮನೆಯ ವ್ಯಕ್ತಿಯನ್ನು ಹನಿಟ್ರ್ಯಾಪ್ ಬಲೆಗೆ ಬೀಳಿಸಿ ದುಡ್ಡು ಮಾಡಲು ಹೋಗಿ, ಇದೀಗ ಜೈಲುಪಾಲಾಗಿದೆ. ಈ ಜೋಡಿ ಪಕ್ಕದ ಮನೆಯ ಯುವಕನ ಮನೆಗೆ ಬಂದು ಪಾರ್ಟಿ ಮಾಡುವ ಎಂದು ತಿಳಿಸಿದ್ದಾರೆ. ಪರಿಚಯದ ವ್ಯಕ್ತಿಗಳಾಗಿರುವುದರಿಂದ ಇವರ ಪಾರ್ಟಿ ಆಫರ್ ಗೆ ಒಪ್ಪಿದ ಯುವಕ ತಮ್ಮ ಮನೆಯಲ್ಲಿಯೇ ಮದ್ಯ ಪಾರ್ಟಿಯನ್ನು ಆಯೋಜಿಸಿದ್ದಾರೆ. ಪಾರ್ಟಿಯ ಮಧ್ಯೆ ಜ್ಯೂಸ್ ಗೆ ಈ ಜೋಡಿ ಅಮಲು ಪದಾರ್ಥ ಸೇವಿಸಿ ಈ ಜೋಡಿಗೆ ನೀಡಿದೆ. ಅವರು ನೀಡಿದ ಅಮಲು ಪದಾರ್ಥ ಸೇವಿಸಿ ಯುವಕನಿಗೆ ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ ಈತ ಬೆತ್ತಲೆಯಾಗಿದ್ದು ಕೈಯಲ್ಲಿದ್ದ ನವರತ್ನದ ರಿಂಗ್ ಮತ್ತು ಕಪಾಟಿನಲ್ಲಿದ್ದ 2 ಲಕ್ಷ 15 ಸಾವಿರ ರೂಪಾಯಿ ಕಾಣೆಯಾಗಿದೆ. ಇವರ ಕುಕೃತ್ಯ ಅರಿವಿಗೆ ಬಂದ ಯುವಕ ಮರುದಿನ ಬೆಳಿಗ್ಗೆ ಅವರ ಮನೆಗೆ ಹೋಗಿ ಹಣ ವಾಪಾಸು ನಿಡುವಂತೆ ಕೇಳಿದ್ದಾನೆ. ಅದಕ್ಕೆ ಒಪ್ಪದ್ದಿದ್ದಾಗ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದ್ದಾನೆ. ಆಗ ನಾಳೆ ಹಣ ನೀಡುವೆ, ದೂರು ನೀಡುವುದು ಬೇಡ ಎಂದು ಈ ಜೋಡಿ ಆತನನ್ನು ವಾಪಾಸು ಕಳುಹಿಸಿದೆ. ಬಳಿಕ ಈ ಜೋಡಿ ಯುವಕನ ಮನೆಗೆ ಬಂದು ತಮ್ಮ ಮೊಬೈಲ್ ನಲ್ಲಿದ್ದ ಯುವಕನ ನಗ್ನ ಪೊಟೋಗಳನ್ನು, ವಿಡಿಯೋಗಳನ್ನು ತೋರಿಸಿ ಹಣ ಕೇಳಿದರೆ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಬೆದರಿಕೆ ಮತ್ತು ಯುವತಿಯ ಅತ್ಯಾಚಾರ ಯತ್ನ ದೂರು ದಾಖಲಿಸುವ ಬೆದರಿಕೆಯೊಡ್ಡಿದ್ದಾನೆ. ಈ ಬಗ್ಗೆ ಯುವಕ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ಅಝ್ವೀನ್ ಮತ್ತು ಸಪ್ನಾ ಜೋಡಿಯನ್ನು ಬಂಧಿಸಿದ್ದಾರೆ

ಹನಿಟ್ರ್ಯಾಪ್ ಪ್ರಕರಣಗಳು ಬಹಳಷ್ಟು ನಡೆಯುತ್ತಿದ್ದು, ಕೆಲವರು ಗೌರವಕ್ಕೆ ಧಕ್ಕೆಯಾಗುವ ದೃಷ್ಟಿಯಿಂದ ದೂರು ನೀಡಲು ಹಿಂಜರಿಯುವ ಮೂಲಕ ಮತ್ತಷ್ಟು ತೊಂದರೆಗೊಳಗಾಗುತ್ತಾರೆ. ಇಂತಹ ಪ್ರಕರಣಗಳಲ್ಲಿ ದೂರು ಅಥವಾ ಮಾಹಿತಿಯನ್ನು ನೀಡಿದರೆ ಗೌಪ್ಯತೆ ಕಾಪಾಡಿಕೊಂಡು ತನಿಖೆ ನಡೆಸುವುದಾಗಿ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments