Monday, October 2, 2023
HomeUncategorizedಹೋಟೆಲ್ ಸಿಬ್ಬಂದಿಗೆ ಥಳಿತ ಆರೋಪ

ಹೋಟೆಲ್ ಸಿಬ್ಬಂದಿಗೆ ಥಳಿತ ಆರೋಪ

- Advertisement -



Renault

Renault
Renault

- Advertisement -

ಮಂಗಳೂರು: ನಗರದ ಹೋಟೆಲ್ ಒಂದರ ಸಿಬ್ಬಂದಿಗೆ ಯರ್ರಾಬಿರ್ರಿ ಥಳಿಸಿರುವ ಘಟನೆ ವರದಿಯಾಗಿದೆ.

ಕಳೆದ 4 ವರ್ಷಗಳಿಂದ ದೂರದ ಪುಂಜಾಲಕಟ್ಟೆಯಿಂದ ಬಂದು , ಪಡೀಲ್ ಸಮೀಪದ ಪೆರ್ಲ,ವೀರನಗರ ಎಂಬಲ್ಲಿ ತನ್ನ ಮಡದಿ ಹಾಗೂ ಪುಟ್ಟ ಮಗುವಿನೊಂದಿಗೆ ವಾಸಿಸುತ್ತಿದ್ದು , ಹೊಟ್ಟೆಪಾಡಿಗಾಗಿ ಪ್ರಶಾಂತ್ ಭಂಡಾರಿ(37) , ನಗರದ ಯೆಯ್ಯಾಡಿಯ ಮಧುವನ್ ಹೋಟೆಲ್‌ ವಿಲೇಜ್‌ನಲ್ಲಿ ಫುಡ್ ಪಾರ್ಸೆಲ್ ಕೌಂಟರ್ ಮೇಲ್ವಿಚಾರಕರಾಗಿದ್ದು , ಎರಡು ದಿನಗಳ ರಜೆಯ ಬಳಿಕ ನಿನ್ನೆ ಹಾಜರಾದ ಸಂದರ್ಭದಲ್ಲಿ ತನ್ನ ಕಛೇರಿಗೆ ಕರೆಸಿ ಮಾಲೀಕ ಜೋಸೆಫ್ ಡಿಸೋಜ ಹಾಗೂ ಆತನ ಮಗ ಡೇನ್ ಡಿಸೋಜ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿ , ಡಿಸಿ ಕಛೇರಿಗೆ ಕರೆದೊಯ್ದು ಯಾರಲ್ಲೋ ಮಾತನಾಡಿಸಿ ಬಳಿಕ ಆಫೀಸಿಗೆ ಕರೆತಂದು ನಿನ್ನೆಲ್ಲಾ ಆಸ್ತಿಯನ್ನು ಜಪ್ತಿ ಮಾಡುತ್ತೇನೆ ಹಾಗೂ ಈ ವಿಚಾರ ಎಲ್ಲೂ ಬಾಯಿಬಿಟ್ಟರೆ ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಸಾಯಂಕಾಲದ ಹೊತ್ತಿಗೆ ತಲೆತಿರುಗಿ ಬಿದ್ದು , ವಾಂತಿ ಮಾಡಿದ್ದು ತಕ್ಷಣ ಅಲ್ಲಿದ್ದವರು ಆಸ್ಪತ್ರೆಗೆ ಸೇರಿಸಿದ್ದಾರೆ. ಮಾಲೀಕರು ಉನ್ನತ ಮಟ್ಟದ ಶಿಫಾರಸು ಮಾಡಬಹುದು, ನಮಗೆ ಜೀವ ಭಯವಿದೆ ಎಂದು ಗಾಯಾಳು ಹೇಳಿಕೊಂಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments