Tuesday, September 28, 2021
Homeಕ್ರೈಂಪತಿ ರಾಜ್‌ ಕುಂದ್ರಾ ರ ಪ್ರಕರಣಗಳ ಬಗ್ಗೆ ಪತ್ನಿ ಶಿಲ್ಪಾ ಶೆಟ್ಟಿಯೊಂದಿಗೆ ಪೊಲೀಸ್ ವಿಚಾರಣೆ

ಪತಿ ರಾಜ್‌ ಕುಂದ್ರಾ ರ ಪ್ರಕರಣಗಳ ಬಗ್ಗೆ ಪತ್ನಿ ಶಿಲ್ಪಾ ಶೆಟ್ಟಿಯೊಂದಿಗೆ ಪೊಲೀಸ್ ವಿಚಾರಣೆ

- Advertisement -
Renault
- Advertisement -
Home Plus
- Advertisement -

ನೀಲಿ ಚಿತ್ರ ದಂಧೆ ನಡೆಸುತ್ತಿದ್ದ ಆರೋಪ ಸಂಬಂಧ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ತಮ್ಮ ಪತಿ ರಾಜ್‌ ಕುಂದ್ರಾ ಮುಗ್ಧರು. ಅವರು ಕೇವಲ ಕಾಮೋತ್ತೇಜಕ ಚಿತ್ರಗಳನ್ನು ತೆಗೆಯುತ್ತಿದ್ದರೇ ಹೊರತು, ಬ್ಲೂ ಫಿಲಂ ಅಲ್ಲ ಎಂದು ಅವರ ಪತ್ನಿ ಶಿಲ್ಪಾ ಶೆಟ್ಟಿ ಹೇಳಿಕೆ ನೀಡಿದ್ದಾರೆ. ಅಲ್ಲದೆ ಇದಕ್ಕೆಲ್ಲಾ ರಾಜ್‌ ಕುಂದ್ರಾ ಅವರ ಲಂಡನ್‌ ಮೂಲದ ಭಾವನೇ ಕಾರಣ ಎಂದು ಆರೋಪಿಸಿದ್ದಾರೆ.

ರಾಜ್‌ ಕುಂದ್ರಾ ಬಂಧನ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿಯವರನ್ನು ಮುಂಬೈ ಪೊಲೀಸರು ಅವರ ಮನೆಯಲ್ಲಿ ಸುಮಾರು 6 ತಾಸು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಧರ್ಭದಲ್ಲಿ, ಬ್ಲೂ ಫಿಲಂಗಳನ್ನು ಪ್ರಸಾರ ಮಾಡಲು ನನ್ನ ಪತಿ ಬಳಸುತ್ತಿದ್ದರು ಎನ್ನಲಾದ ಹಾಟ್‌ಶಾಟ್ಸ್‌ ಆಪ್‌ನಲ್ಲಿ ಏನಿರುತ್ತಿತ್ತು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆ ಆಪ್‌ನಲ್ಲಿ ನನ್ನ ಪಾತ್ರ ಯಾವುದೂ ಇಲ್ಲ ಹಾಗೂ ನಾನು ಭಾಗೀದಾರಳೂ ಅಲ್ಲ ಎಂದು ತಿಳಿಸಿದ್ದಾರೆ. ಕಾಮೋತ್ತೇಜಕ ಚಿತ್ರಗಳಿಗೂ ಅಶ್ಲೀಲ ಚಿತ್ರಗಳಿಗೂ ವ್ಯತ್ಯಾಸವಿದೆ. ರಾಜ್‌ ಕುಂದ್ರಾರವರು ಅಶ್ಲೀಲ ಚಿತ್ರಗಳ ನಿರ್ಮಾಪಕರಾಗಿರಲಿಲ್ಲ. ಕಾಮೋತ್ತೇಜಕ ಚಿತ್ರಗಳನ್ನು ಚಿತ್ರೀಕರಿಸುತ್ತಿದ್ದರು. ಆದರೆ ಒಟಿಟಿ ಪ್ಲಾಟ್‌ಫಾರ್ಮ್ ಗಳು ಹಾಗೂ ವೆಬ್‌ಸೀರೀಸ್‌ನಲ್ಲಿ ಇರುವ ದೃಶ್ಯಗಳು ರಾಜ್‌ ರವರ ಆಪ್‌ನಲ್ಲಿನ ಚಿತ್ರಗಳಿಗಿಂತ ಹೆಚ್ಚು ಅಶ್ಲೀಲವಾಗಿರುತ್ತವೆ ಎಂದು ಶಿಲ್ಪಾ ಹೇಳಿದ್ದಾರೆ.

ರಾಜ್‌ ಕುಂದ್ರಾ ರವರು ಯಸ್‌ ಬ್ಯಾಂಕಿನಲ್ಲಿ ಹೊಂದಿರುವ ಖಾತೆಯಿಂದ ಯುನೈಟೆಡ್‌ ಬ್ಯಾಂಕ್‌ ಆಫ್ರಿಕಾದ ಖಾತೆಯೊಂದಕ್ಕೆ ಹಣ ವರ್ಗಾವಣೆಯಾಗಿದೆ. ಈ ಬಗ್ಗೆ ದಾಖಲೆಗಳು ಸಿಕ್ಕಿದೆ. ಹೀಗಾಗಿ ಬ್ಲೂ ಫಿಲಂ ಮಾರಾಟದಿಂದ ಬಂದ ಹಣವನ್ನು ಆನ್‌ಲೈನ್‌ ಬೆಟ್ಟಿಂಗ್‌ಗೆ ಬಳಸಲಾಗುತ್ತಿತ್ತೇ ಎಂಬ ಅನುಮಾನ ಪೊಲೀಸರನ್ನು ಕಾಡುತ್ತ ಇದೆ.

ಹಾಟ್‌ಶಾಟ್ಸ್‌ ಆಪ್‌ನಲ್ಲಿ ರಾಜ್‌ ಕುಂದ್ರಾ ರವರ ಭಾವ ಪ್ರದೀಪ್‌ ಬಕ್ಸಿ ಭಾಗೀದಾರರಾಗಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್‌ ಕುಂದ್ರಾ ಅವರು ಬ್ಲೂ ಫಿಲಂ ದಂಧೆಯಲ್ಲಿ ತೊಡಗಿರುವ ವಿಷಯ ಶಿಲ್ಪಾ ಅವರಿಗೆ ಗೊತ್ತಿದೆಯೇ ಎಂಬುದನ್ನು ಅರಿಯುವ ಉದ್ದೇಶದಿಂದ ಪೊಲೀಸರು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments