ಈ ಮರದ ಕೆಳಗೆ ವಾಹನ ಓಡಿಸಿದ್ರೆ ಬೀಳೋದು ಪಕ್ಕಾ…!!!
ಕೊಂಚ ಯಾಮಾರಿದ್ರೂ ಹರೋ ಹರ…!!!
ಶಿವಮೊಗ್ಗ: ಜನರು ಎಂದಿನಂತೆ ಓಡಾಡ್ತಾ ಇದ್ರು.. ಆದ್ರೆ, ಕೆಲ ದ್ವಿಚಕ್ರ ವಾಹನಗಳು ನಿಯಂತ್ರಣ ತಪ್ಪಿ ಬೀಳ್ತಾ ಇದ್ವು. ಸ್ಕಿಡ್ ಆಗ್ತಾ ಇದ್ವು.. ಬೆಳ್ಳಂ ಬೆಳಗ್ಗೆ ಸ್ಕೂಲ್, ಕಾಲೇಜ್, ಕಚೇರಿಯ ಕಡೆ ಹೊರಟವರಿಗೆ ನಿಜಕ್ಕೂ ಶಾಕ್ ಆಗಿತ್ತು. ಹೌದು, ಈ ದೃಶ್ಯ ಕಂಡು ಬಂದಿದ್ದು ಶಿವಮೊಗ್ಗ ನಗರದ ನಂಜಪ್ಪ ಆಸ್ಪತ್ರೆಯ ಮುಂಭಾಗದಲ್ಲಿ.
ಮರದಿಂದ ಬೀಳುವ ಒಂದು ರೀತಿಯ ರಸ ವಾಹನಗಳು ಸ್ಕಿಡ್ ಆಗೋದಕ್ಕೆ ಕಾರಣ. ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ರು. ಅಲ್ಲದೆ ಪಾಲಿಕೆಯವರು ಸ್ಥಳಕ್ಕೆ ಆಗಮಿಸಿ, ರಸ್ತೆಯನ್ನು ಕ್ಲೀನ್ ಮಾಡುವ ಮೂಲಕ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅದೇನೆ ಇದ್ರು, ಈ ಮರ ಮಾತ್ರ ತುಂಬಾನೆ ಡಿಫರೆಂಟ್. ಯಾವುದಕ್ಕೂ ವಾಹನ ಸವಾರರು ಎಚ್ಚರಿಕೆಯಿಂದ ಕುವೆಂಪು ರಸ್ತೆಯಲ್ಲಿ ಸಂಚರಿಸಬೇಕು.. ಯಾಮಾರಿದ್ರೆ ನೀವೂ ಸಹ ಬೀಳಬಹುದು.