Wednesday, May 31, 2023
Homeಕರಾವಳಿಪೊಲೀಸ್ ಕಮಿಷನರ್ ಮಾರು ವೇಷದ ದಾಳಿಯಲ್ಲಿ ಸಿಕ್ಕಿದ್ದು 12 ಲೋಡ್ ಮರಳು!

ಪೊಲೀಸ್ ಕಮಿಷನರ್ ಮಾರು ವೇಷದ ದಾಳಿಯಲ್ಲಿ ಸಿಕ್ಕಿದ್ದು 12 ಲೋಡ್ ಮರಳು!

- Advertisement -


Renault

Renault
Renault

- Advertisement -

ಮಂಗಳೂರು, ಫೆ.28: ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ಮಾರುವೇಷದಲ್ಲಿ ನಡೆಸಿದ ಅಕ್ರಮ ಮರಳು ಸಾಗಾಟ ಪತ್ತೆ ಕಾರ್ಯಾಚರಣೆ ಸಂಬಂಧಿಸಿ ಉಳ್ಳಾಲ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. 

ಲಾರಿ ಚಾಲಕ ಸೂರಜ್, ಲಾರಿಯಲ್ಲಿದ್ದ ಚಂದ್ರಹಾಸ, ರಾಕೇಶ್, ಸನಮ್ ಮತ್ತು ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ (ಕೆಎ 19 ಎಸಿ 3559) ಮಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಲಾರಿಯನ್ನು ನಿಲ್ಲಿಸಿ, ಪ್ರಶ್ನೆ ಮಾಡಿದಾಗ ಬೆದರಿದ ಚಾಲಕ ಸೂರಜ್ ಲಾರಿ ಬಿಟ್ಟು ಓಡಿ ಪರಾರಿಯಾಗಿದ್ದಾನೆ. ಇತರೇ ಮೂವರನ್ನು ಉಳ್ಳಾಲ ಪೊಲೀಸರು ಬಂದು ಬಂಧಿಸಿದ್ದರು. ಡಿಸಿಪಿಯನ್ನೇ ದೂರುದಾರನನ್ನಾಗಿಸಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 

ಇನ್ನೊಂದು ಪ್ರಕರಣದಲ್ಲಿ ಟಿಪ್ಪರ್ ಲಾರಿಗೆ ಬೆಂಗಾವಲಾಗಿ ಬರುತ್ತಿದ್ದ ಎರಡು ಕಾರು ಮತ್ತು ಅದರಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಲ್ಯಾಸ್, ರಹೀಂ ಮತ್ತು ಇತರ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಉಳ್ಳಾಲ ಪೊಲೀಸರು ಕಾರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ, ಅವರನ್ನು ದೂಡಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಹಲ್ಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ಉಳ್ಳಾಲ ಎಸ್ಐ ಚಂದ್ರ ದೂರುದಾರರಾಗಿದ್ದು ಎರಡು ಕಾರು ಕೆಎ 19 ಎಂ ಎಚ್ 0649 ಮತ್ತು ಕೆಎಲ್ 14 ಕೆ 8199 ಹಾಗೂ ಆರೋಪಿಗಳ ವಿರುದ್ಧ ಕರ್ತವ್ಯಕ್ಕೆ ಅಡ್ಡಿ, ಪೊಲೀಸರಿಗೆ ಹಲ್ಲೆಗೈದ ಆರೋಪದಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಘಟನೆಯ ಬಳಿಕ, ಕೋಟೆಕಾರು, ಬೀರಿ ಮತ್ತು ಉಳ್ಳಾಲದ ಅಜ್ಕಿನಡ್ಕದಲ್ಲಿ ಮರಳು ದಾಸ್ತಾನು ಮಾಡಿರುವುದನ್ನು ಉಳ್ಳಾಲ ಪೊಲೀಸರು ಪತ್ತೆ ಮಾಡಿದ್ದಾರೆ. ಮೂರು ಲಾರಿ ಹಾಗೂ ವಿವಿಧ ಕಡೆ ದಾಸ್ತಾನು ಮಾಡಿದ್ದ ಸುಮಾರು 12 ಲೋಡ್ ಮರಳನ್ನು ಜಪ್ತಿ ಮಾಡಲಾಗಿದೆ. ಈ ಮರಳನ್ನು ಕೇರಳಕ್ಕೆ ಅಕ್ರಮವಾಗಿ ಸಾಗಿಸಲು ದಾಸ್ತಾನು ಮಾಡಿರುವುದಾಗಿ ಪೊಲೀಸರು ಪತ್ತೆ ಮಾಡಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments