Monday, January 17, 2022
Homeಕ್ರೈಂದಾರಿ ತಪ್ಪಿದ ಮಹಿಳೆ: ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿದ ಪ್ರಿಯತಮೆ ಕೊಂದ ಪ್ರಿಯಕರ

ದಾರಿ ತಪ್ಪಿದ ಮಹಿಳೆ: ಮತ್ತೊಬ್ಬನೊಂದಿಗೆ ಸಂಬಂಧ ಬೆಳೆಸಿದ ಪ್ರಿಯತಮೆ ಕೊಂದ ಪ್ರಿಯಕರ

- Advertisement -
Renault






- Advertisement -

ಬೆಂಗಳೂರು: ಮತ್ತೊಬ್ಬನೊಂದಿಗೆ ಪ್ರಿಯತಮೆ ಅಕ್ರಮ ಸಂಬಂಧ ಬೆಳೆಸಿದ್ದನ್ನು ತಿಳಿದು ಆಕ್ರೋಶಗೊಂಡ ಪ್ರಿಯಕರ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 35 ವರ್ಷದ ಮಹಿಳೆಯ ಮೇಲೆ ಹಲ್ಲೆ ನಡೆಸಿ ಆಕೆಯನ್ನು ಕೊಲೆ ಮಾಡಿ ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದ ಮಂಜು ಬಂಧಿತ ಆರೋಪಿ.

ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದ ಮಹಿಳೆ ಆರು ವರ್ಷಗಳ ಹಿಂದೆ ಗಂಡ ಮತ್ತು ಮಕ್ಕಳಿಂದ ದೂರವಾಗಿದ್ದಳು. ಆಕೆಗೆ ಮಳವಳ್ಳಿ ತಾಲೂಕಿನ ಬಾರ್ ಬೆಂಡಿಂಗ್ ಕೆಲಸಗಾರ ಮಂಜು ಜೊತೆಗೆ ಸಂಬಂಧ ಬೆಳೆದಿದೆ. ಇಬ್ಬರು ಬೀರೇಶ್ವರ ನಗರದಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಇತ್ತೀಚೆಗೆ ಮಹಿಳೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿರುವ ವಿಚಾರ ತಿಳಿದ ಮಂಜು ಜಗಳವಾಡಿದ್ದಾನೆ.

ಜನವರಿ 7 ರಂದು ರಾತ್ರಿ ಮದ್ಯಸೇವನೆ ಬಳಿಕ ಇಬ್ಬರ ನಡುವೆ ಜಗಳ ಜೋರಾಗಿದ್ದು, ಸುತ್ತಿಗೆಯಿಂದ ತಲೆಗೆ ಹೊಡೆದು ತೊಡೆ ಮೂಳೆ ಮುರಿದ ಮಂಜು ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆ ಮೃತಪಟ್ಟು ಎರಡು ದಿನಗಳಾದರೂ ಆಕೆಯ ಗುರುತು ಪತ್ತೆಯಾಗಿರಲಿಲ್ಲ. ಪೊಲೀಸರು ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿ ಆಕೆಯ ಸೋದರನ ಸಂಪರ್ಕ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.

- Advertisement -



Home Plus


LEAVE A REPLY

Please enter your comment!
Please enter your name here

- Advertisment -

Most Popular

Recent Comments