Friday, December 2, 2022
Homeಕರಾವಳಿಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ಅಕ್ಟೋಬರ್ ನಲ್ಲಿ ಕರ್ನಾಟಕ ಯೋಜನಾ ಸಮಿತಿ ಅಸ್ತಿತ್ವಕ್ಕೆ

ಮರ್ಕಝ್ ನಾಲೇಜ್ ಸಿಟಿ ಉದ್ಘಾಟನೆ ಅಕ್ಟೋಬರ್ ನಲ್ಲಿ ಕರ್ನಾಟಕ ಯೋಜನಾ ಸಮಿತಿ ಅಸ್ತಿತ್ವಕ್ಕೆ

- Advertisement -
Renault

Renault

Renault

- Advertisement -

ಮಂಗಳೂರು: ಇಂಡಿಯನ್ ಗ್ರಾಂಡ್ ಮುಪ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ನೇತೃತ್ವದಲ್ಲಿ ಕೋಝಿಕ್ಕೋಡ್ ಜಿಲ್ಲೆಯ ಕೈದಪ್ಪೊಯಿಲ್ ಎಂಬಲ್ಲಿ ಸುಮಾರು ನೂರೈವತ್ತು ಏಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮರ್ಕಝ್ ನಾಲೇಜ್ ಸಿಟಿಯ ಮೊದಲ ಹಂತದ ಉದ್ಘಾಟನಾ ಸಮಾರಂಭವು ಇದೇ ಅಕ್ಟೋಬರ್ ಕೊನೆಯ ವಾರ ನಡೆಯಲಿದ್ದು ಆ ಬಗ್ಗೆ ಕರ್ನಾಟಕದಲ್ಲಿ, ವಿವಿಧ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಕಾರಂದೂರು ಮರ್ಕಝ್ ನಲ್ಲಿ ನಡೆದ ರಾಜ್ಯದ ಸುನ್ನೀ ಸಂಘಟನಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಯಿತು

ಬೆಂಗಳೂರು,ಮಂಗಳೂರು, ಕೊಡಗು ಮತ್ತು ಶಿವಮೊಗ್ಗಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ ಬೃಹತ್ ಸಮಾವೇಶ ನಡೆಯಲಿದ್ದು ನಾಲೇಜ್ ಸಿಟಿಯ ಕಾರ್ಯ ಚಟುವಟಿಕೆಗಳನ್ನು ಸಾರ್ವಜನಿಕವಾಗಿ ವಿವರಿಸಿ ಕೊಡಲಾಗುವುದು.

ಸದರಿ ಸಮಾವೇಶಗಳಲ್ಲಿ ಮರ್ಕಝ್ ನಾಲೇಜ್ ಸಿಟಿ ಅಧ್ಯಕ್ಷ ಸುಲ್ತಾನುಲ್ ಉಲಮಾ ಎ. ಪಿ.ಉಸ್ತಾದ್, ಸಯ್ಯಿದ್ ಅಲಿ ಬಾಫಖಿ ತಂಙಳ್, ಮಾನೇಜಿಂಗ್ ಡೈರೆಕ್ಟರ್ ಡಾ. ಅಬ್ದುಲ್ ಹಕೀಂ ಅಝ್ಹರಿ,ನಾಯಕರಾದ ಸಿ.ಮುಹಮ್ಮದ್ ಫೈಝಿ,ಸಯ್ಯಿದ್ ಮುಹಮ್ಮದ್ ತುರಾಬ್ ತಂಙಳ್, ಸಯ್ಯಿದ್ ಮುತ್ತನೂರ್ ತಂಙಳ್,ಡಾ.ಅಬ್ದುಲ್ ಸಲಾಂ, ಅಡ್ವಕೇಟ್ ತನ್ವೀರ್ ಮುಂತಾದವರು ಭಾಗವಹಿಸಲಿದ್ದಾರೆ.

ಕರ್ನಾಟಕದ ಯೋಜನಾ‌ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು ಅಧ್ಯಕ್ಷರಾಗಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ಕಾರ್ಯಾಧ್ಯಕ್ಷರಾಗಿ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್, ಉಪಾಧ್ಯಕ್ಷರಾಗಿ ಶಾಫಿ ಸ‌ಅದಿ ಬೆಂಗಳೂರು, ಪ್ರಧಾನ ಸಂಚಾಲಕರಾಗಿ ಅಶ್‌ರಫ್ ಸ‌ಅದಿ ಮಲ್ಲೂರು, ಸಂಚಾಲಕರಾಗಿ ಅಬ್ದುಲ್ಲತೀಫ್ ಸ‌ಅದಿ ಶಿವಮೊಗ್ಗ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ,
ಕೋಶಾಧಿಕಾರಿಯಾಗಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ, ಸಂಯೋಜಕರಾಗಿ ಮರ್ಝೂಖ್ ಸ‌ಅದಿ ಕಾಮಿಲ್ ಸಖಾಫಿ ಕೋಝಿಕ್ಕೋಡ್ ಹಾಗೂ ಸದಸ್ಯರಾಗಿ ಕೆಪಿ ಹುಸೈನ್ ಸ‌ಅದಿ ಕೆಸಿ ರೋಡ್, ಜಿ.ಎಂ.ಕಾಮಿಲ್ ಸಖಾಫಿ,ಪಿ.ಎಂ.ಉಸ್ಮಾನ್ ಸ‌ಅದಿ ಪಟ್ಟೋರಿ, ಅಬ್ದುಲ್ ರಹ್ಮಾನ್ ಮದನಿ ಜೆಪ್ಪು, ಅಬ್ದುಲ್ ನಾಸಿರ್ ಲಕ್ಕಿಸ್ಟಾರ್,
ಕೆ.ಎಚ್.ಇಸ್ಮಾಯಿಲ್ ಸ‌ಅದಿ ಕಿನ್ಯ,ಹನೀಫ್ ಹಾಜಿ ಉಳ್ಳಾಲ್,ಅಬ್ದುಲ್‌ ಹಮೀದ್ ಬಜಪೆ, ಅಶ್‌ರಫ್ ಕಿನಾರಾ ಇವರನ್ನು ಆರಿಸಲಾಯಿತು.

- Advertisement -

LEAVE A REPLY

Please enter your comment!
Please enter your name here

Most Popular

Recent Comments