Monday, October 2, 2023
Homeಕರಾವಳಿಸೌದಿ ಅರೇಬಿಯಾ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಘಟಕದಿಂದ ಸನ್ಮಾನ ಕಾರ್ಯಕ್ರಮ

ಸೌದಿ ಅರೇಬಿಯಾ ಇಂಡಿಯನ್ ಓವರ್ಸೀಸ್ ಕಾಂಗ್ರೆಸ್ ಘಟಕದಿಂದ ಸನ್ಮಾನ ಕಾರ್ಯಕ್ರಮ

- Advertisement -Renault

Renault
Renault

- Advertisement -

ಮಂಗಳೂರು: ಅನಿವಾಸಿ ಭಾರತೀಯರು ಸಂಘಟಿಸಿರುವ Indian Overseas Congress (IOC) ಶುಕ್ರವಾರ (ಫೆಬ್ರವರಿ 19) ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಇಂಡಿಯನ್ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ ಮ್ಯಾನ್ ಬಂಟ್ವಾಳ್,ಇಂಡಿಯನ್ ಯೂತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ್ ಶೆಟ್ಟಿ, ಯೂತ್ ಕಾಂಗ್ರೆಸ್ ರಾಜ್ಯ ಸೆಕ್ರೆಟರಿ ಮೆರಿಲ್ ರೇಗೋ ಸನ್ಮಾನಕ್ಕೆ ಭಾಜನರಾಗಿದ್ದಾರೆ.

ಸೌದಿ ಅರೇಬಿಯಾದಲ್ಲಿ ರೂಪುಗೊಂಡಿರುವ IOC ಯ ಯಶಸ್ವಿ ಕಾರ್ಯಕ್ರಮಗಳ ಭಾಗವಾಗಿ ಸನ್ಮಾನ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಬಿ. ರಮಾನಾಥ ರೈ, ಯು. ಟಿ.ಖಾದರ್, ಅಭಯಚಂದ್ರ ಜೈನ್, ಎಂಎಲ್ಸಿ ಹರೀಶ್ ಕುಮಾರ್, ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಮೊಯಿದಿನ್ ಬಾವಾ,ವಸಂತ ಬಂಗೇರ, ಮಾಜಿ ಎಂಎಲ್ಸಿ ಐವನ್ ಡಿಸೋಜಾ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಕಾಂಗ್ರೆಸ್ ಮುಖಂಡರಾದ ಆರ್. ರಘು, ಮಿಥುನ್ ರೈ, ಮೊದಲಾದವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

ವಿವಿಧ ಅನಿವಾಸಿ ಭಾರತೀಯ ಸಂಘಟನೆಗಳ ಪದಾಧಿಕಾರಿಗಳು, ಸದಸ್ಯರು, ಹಿತೈಷಿಗಳು ಮತ್ತಿತರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments