ಬಂಟ್ವಾಳ: ಕಡೇಶ್ವಾಲ್ಯ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಯಶವಂತ ತಯಾರಿಸಿದ ವಿಜ್ಞಾನ ಮಾದರಿಯು ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆ ಯಾಗಿದ್ದು, ಪ್ರಶಂಸೆಗೆ ಪಾತ್ರವಾಗಿದೆ.
ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷ ರತ ಇಲಾಖೆ ಧಾರವಾಡದಲ್ಲಿ ನಡೆಸಿದ ರಾಜ್ಯ ಮಟ್ಟದ ಪ್ರದರ್ಶನದಲ್ಲಿ ಅವರ ಬಹು ಉಪಯೋಗಿ ಕೃಷಿ ಯಂತ್ರದ ಅನ್ವೇಷಣೆಯು ಬಹುಮಾನ ಪಡೆದು ಕೇರಳದ ತೃಶ್ಶೂರ್‌ನಲ್ಲಿ ಜ.27ರಿಂದ 31ರ ವರೆಗೆ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ರಾಜ್ಯದಿಂದ ಒಟ್ಟು 20 ಮಾದರಿ ಗಳು ಆಯ್ಕೆಯಾಗಿದ್ದು, ವೈಯಕ್ತಿಕ ವಿಭಾಗದಲ್ಲಿ ದ.ಕ. ಜಿಲ್ಲೆಯಿಂದ ವರ ಮಾದರಿ ಮಾತ್ರ ಆಯ್ಕೆಯಾಗಿದೆ.
ಕೆಮ್ಮಾನುವಿನ ಲೋಕೇಶ – ಪವಿತ್ರಾ ದಂಪತಿಯ ಪುತ್ರನಾದ ಯಶವಂತ ನಿಗೆ ಗಣಿತ ಶಿಕ್ಷಕಿ ಗೀತಾ ಕುಮಾರಿ ಮಾರ್ಗದರ್ಶನ ನೀಡಿ ದ್ದರು. ಈ ಮಾದರಿಯು ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿತ್ತು.