Tuesday, October 26, 2021
Homeದೇಶಕೇಂದ್ರ ಸರ್ಕಾರದಿಂದ ಐಟಿ ರಿಟರ್ನ್ ಸಲ್ಲಿಕೆ ಕೊನೆಯ ದಿನದ ಗಡು ವಿಸ್ತರಣೆ

ಕೇಂದ್ರ ಸರ್ಕಾರದಿಂದ ಐಟಿ ರಿಟರ್ನ್ ಸಲ್ಲಿಕೆ ಕೊನೆಯ ದಿನದ ಗಡು ವಿಸ್ತರಣೆ

- Advertisement -
Renault
- Advertisement -
Home Plus
- Advertisement -

ನವದೆಹಲಿ : ಆದಾಯ ತೆರಿಗೆ ಇಲಾಖೆ ಜನರಿಗೆ ಸುಲಭ ರೀತಿಯಲ್ಲಿ ತೆರಿಗೆ ಪಾವತಿ ಸೇರಿದಂತೆ, ಐಟಿ ರಿಟರ್ನ್ ಸಲ್ಲಿಕೆಗೆ ಹೊಸ ವೆಬ್‌ಸೈಟ್ ಲಾಂಚ್ ಮಾಡಿದೆ. ಆದರೆ ತಾಂತ್ರಿಕ ದೋಷದಿಂದ ಕೇಂದ್ರ ಸರ್ಕಾರ ರಿಟರ್ನ್ ಸಲ್ಲಿಕೆ ಅಂತಿಮ ಗಡುವ ವಿಸ್ತರಿಸುತ್ತಲೇ ಬಂದಿತ್ತು. ಇದೀಗ ಸೆಪ್ಟೆಂಬರ್ ಗಡುವನ್ನು ಡಿಸೆಂಬರ್ 31 ರ ವರೆಗೆ ವಿಸ್ತರಿಸಿದೆ. ಪ್ರತಿ ವರ್ಷ ಐಟಿ ರಿಟರ್ನ್ ಸಲ್ಲಿಕೆ ಜುಲೈ ತಿಂಗಳಲ್ಲಿ ಅಂತ್ಯವಾಗಲಿದೆ. ಆದರೆ ಈ ಬಾರಿ ಕೊರೋನಾ ವೈರಸ್ ಹಾಗೂ ಪೋರ್ಟಲ್ ತಾಂತ್ರಿಕ ದೋಷದಿಂದ ಸೆಪ್ಟೆಂಬರ್ 30 ರ ವರೆಗೆ ವಿಸ್ತರಿಸಲಾಗಿತ್ತು. ಈಗ ಪುನಃ ಡಿಸೆಂಬರ್ 31 ರ ವರೆಗೆ ವಿಸ್ತರಿಸಿದೆ.

ಇನ್ಫೋಸಿಸ್ ಸಂಸ್ಥೆ ಆದಾಯ ತೆರಿಗೆ ಇಲಾಖೆ ಪೋರ್ಟಲ್ ಅಭಿವೃದ್ಧಿಪಡಿಸಿದೆ. ನಿಗದಿತ ಸಮಯದಲ್ಲಿ ತಾಂತ್ರಿಕ ದೋಷ ಸರಿಪಡಿಸ ಇನ್ಫೋಸಿಸ್ ವ್ಯವಸ್ಥಾಪಕ ನಿರ್ದೇಕರಿಗೆ ಕೇಂದ್ರ ಸರ್ಕಾರ ನೊಟೀಸ್ ನೀಡಿತ್ತು. ಖುದ್ದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮುಂದೆ ಹಾಜರಾದ ಇನ್ಫೋಸಿಸ್ ನಿರ್ದೇಶಕ ತಾಂತ್ರಿಕ ದೋಷ ನಿವಾರಿಸುವ ಭರವಸೆ ನೀಡಿದ್ದರು. ಕೇಂದ್ರ ಸರ್ಕಾರ 15 ದಿನದ ಕಾಲಾವಕಾಶ ನೀಡಿದೆ. ಆದಾಯ ತೆರಿಗೆ ಇಲಾಖೆ 196 ರ ಕಾಯ್ದೆ ಅಡಿಯಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಮತ್ತು ಆಡಿಟ್ ವರದಿಗಳನ್ನು ಸಲ್ಲಿಸುವ ದಿನಾಂಕ ವಿಸ್ತರಿಸಲಾಗಿದೆ. ತೆರಿಗೆದಾರರು ಸೂಚಿಸಿದ ಸಮಸ್ಯೆಗಳನ್ನು ಪರಿಗಣಿಸಿ, CBDT ಯು AY 21-22 ಗೆ ITR ಗಳು ಮತ್ತು ಆಡಿಟ್ ವರದಿಗಳನ್ನು ಸಲ್ಲಿಸಲು ಅಂತಿಮ ದಿನಾಂಕಗಳನ್ನು ವಿಸ್ತರಿಸುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆಯಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments