Wednesday, May 31, 2023
Homeಕರಾವಳಿಬಿಲ್ಲವರ ಆರಾಧ್ಯ ದೈವ ಕೋಟಿ-ಚೆನ್ನಯರಿಗೆ ಅವಹೇಳನ...!!!

ಬಿಲ್ಲವರ ಆರಾಧ್ಯ ದೈವ ಕೋಟಿ-ಚೆನ್ನಯರಿಗೆ ಅವಹೇಳನ…!!!

- Advertisement -


Renault

Renault
Renault

- Advertisement -

ಮಂಗಳೂರು: ದ.ಕ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಬಿಲ್ಲವರ ಆರಾಧ್ಯ ವೀರ ಪುರುಷರಾದ ಕೋಟಿ-ಚೆನ್ನಯ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿರುವುದು ಖಂಡನೀಯ. ಇದನ್ನ ಬಿಲ್ಲವ ಸಮಾಜ ಖಂಡಿಸುತ್ತೆ ಎಂದು ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಹೇಳಿದ್ದಾರೆ. ಫೇಸ್ ಬುಕ್ ಪೇಜ್ ಲೈವ್ ನಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಇವರು, ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ವೀರ ಪುರುಷರು ಕೋಟಿ ಚೆನ್ನಯರು.

ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣಿಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ. ಹೀಗಿರುವಾಗ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತಾಡಿರುವುದು ಖಂಡನೀಯ ಮಾತ್ರವಲ್ಲ ಆಶ್ಚರ್ಯ ಹುಟ್ಟಿಸುತ್ತದೆ.

ಹಾಗಾಗಿ ನಾನು ಹೇಳುತ್ತಿದ್ದೇನೆ, ಜಗದೀಶ್ ಅದಿಕಾರಿಯವರ ಮುಖಕ್ಕೆ ಯಾರಾದ್ರು ಬಿಲ್ಲವರ ಯುವಕರು ಮಸಿ ಬಳಿದರೆ ಅವರಿಗೆ ಒಂದು ಲಕ್ಷ ಬಹುಮಾನ ನೀಡುವೆ. ನಾಲ್ಕು ದಿನಗಳ ಒಳಗೆ ಜಗದೀಶ್ ಅಧಿಕಾರಿ ಕ್ಷಮೆ ಯಾಚಿಸಬೇಕು. ಕ್ಷಮೆಯಾಚಿಸದೇ ಇದ್ದರೆ ಜಗದೀಶ್ ಅಧಿಕಾರಿ ಮುಖಕ್ಕೆ ಮಸಿ‌ ಬಳಿಯುವ ಬಿಲ್ಲವ ಯುವಕರಿಗೆ ಒಂದು ಲಕ್ಷ ಬಹುಮಾನ ಘೋಷಣೆ. ಫೇಸ್ ಲೈವ್ ನಲ್ಲಿ ಬಹುಮಾಬ ಘೋಷಿಸಿದ ಪ್ರತಿಭಾ ಕುಳಾಯಿ.

- Advertisement -

LEAVE A REPLY

Please enter your comment!
Please enter your name here

Most Popular

Recent Comments