Saturday, June 3, 2023
Homeಕರಾವಳಿಜೆಡಿಎಸ್ ಕಾರ್ಯಕರ್ತರಿಗೆ ಹೆದರಿದ್ರಾ ಸಚಿವ ಯೋಗಿಶ್ವರ್?: ಕಾರು ಬಿಟ್ಟು ತೆರಳಿದ್ರು!!!

ಜೆಡಿಎಸ್ ಕಾರ್ಯಕರ್ತರಿಗೆ ಹೆದರಿದ್ರಾ ಸಚಿವ ಯೋಗಿಶ್ವರ್?: ಕಾರು ಬಿಟ್ಟು ತೆರಳಿದ್ರು!!!

- Advertisement -


Renault

Renault
Renault

- Advertisement -

ಮಂಗಳೂರು, ಫೆ.28 :  ಕುಮಾರಸ್ವಾಮಿಯನ್ನು ಜೋಕರ್ ಎಂದು ಕರೆದಿದ್ದ ಪ್ರವಾಸೋದ್ಯಮ ಸಚಿವ ಸಿ.ಪಿ ಯೋಗೇಶ್ವರ್ ಅವರಿಗೆ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಯುವ ಜೆಡಿಎಸ್ ಕಾರ್ಯಕರ್ತರು ಘೇರಾವ್ ಹಾಕಿದ್ದಾರೆ. 

ಜೆಡಿಎಸ್ ಯೂತ್ ಘಟಕದ ಅಧ್ಯಕ್ಷ ಅಕ್ಷಿತ್ ಸುವರ್ಣ ನೇತೃತ್ವದಲ್ಲಿ ಕಾರ್ಯಕರ್ತರು ಇಂದು ಬೆಳಗ್ಗೆ ಸಚಿವ ಯೋಗೇಶ್ವರ್ ವಾಸ್ತವ್ಯ ಇದ್ದ ಪಿವಿಎಸ್ ವೃತ್ತದ ಬಳಿಯ ಓಶಿಯನ್ ಪರ್ಲ್ ಹೋಟೆಲ್ ಬಳಿ ಜಮಾಯಿಸಿದ್ದರು. ಬೆಂಗಳೂರಿಗೆ ತೆರಳಲು ಅಣಿಯಾಗುತ್ತಿದ್ದ ಸಚಿವರು ಯುವ ಜೆಡಿಎಸ್ ಕಾರ್ಯಕರ್ತರನ್ನು ಕಂಡು ತಮ್ಮ ಸರಕಾರಿ ವಾಹನ ಬಿಟ್ಟು ಬೇರೆ ವಾಹನದಲ್ಲಿ ಪ್ರಯಾಣಿಸಿದರು. ಇದನ್ನರಿತ ಜೆಡಿಎಸ್ ಕಾರ್ಯಕರ್ತರು ಸಚಿವರ ಎಸ್ಕಾರ್ಟ್ ವಾಹನಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಸಚಿವ ಯೋಗೇಶ್ವರ್ ನಮ್ಮ ನಾಯಕರಾದ ಎಚ್ ಡಿ ಕುಮಾರಸ್ವಾಮಿ ಅವರನ್ನು ಜೋಕರ್ ಎಂದು ಕರೆದಿರುವುದು ಖಂಡನೀಯ. ದ.ಕ. ಜಿಲ್ಲೆಯಲ್ಲಿ ಕೂಡ ಜೆ ಡಿಎಸ್ ಬಲಿಷ್ಠವಾಗಿದೆ ಎನ್ನುವುದನ್ನು ಸಚಿವರು ಮರೆತು ಇಂತಹ ಹೇಳಿಕೆ ನೀಡಿದ್ದು, ನಮ್ಮ ಶಕ್ತಿ ಏನು ಎಂದು ತೋರಿಸಲು ಇಲ್ಲಿ ಅವರ ವಿರುದ್ಧ ಪ್ರತಿಭಟಿಸಿದ್ದೇವೆ. ಆದರೆ ನಮ್ಮನ್ನ ನೋಡಿದ ಸಚಿವರು ಹಿಂಬಾಗಿಲ ಮೂಲಕ ತಪ್ಪಿಸಿಕೊಂಡು ಹೋಗಿದ್ದು ತನ್ನ ಸರಕಾರಿ ವಾಹನದಲ್ಲಿ ಬೇರೆಯವರನ್ನು ಕೂರಿಸಿ ಅವರು ಬೇರೆ ಮಾರ್ಗದಿಂದ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಸಾರ್ವಜನಿಕವಾಗಿ ಅಂತಹ ಕೀಳು ಹೇಳಿಕೆ ನೀಡಿರುವ ಸಚಿವರಿಗೆ ಧೈರ್ಯವಿದ್ದಲ್ಲಿ ನೇರ ಮಾರ್ಗದಿಂದಲೇ ತೆರಳುತ್ತಿದ್ದರು, ಅದನ್ನು ಬಿಟ್ಟು ಹಿಂಬಾಗಿಲಿನಿಂದ ಹೋಗುತ್ತಿರಲಿಲ್ಲ. ಇನ್ನಾದರೂ ಸಚಿವರು ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ತಮ್ಮ ಘನತೆಗೆ ತಕ್ಕಂತೆ ವರ್ತಿಸಲಿ ಎಂದು ಎಚ್ಚರಿಸಿದರು.

ದ.ಕ. ಜಿಲ್ಲಾ ಯುವ ಜನತಾದಳ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಫೈಝಲ್ ಮುಹಮ್ಮದ್, ಯುವ ಜನತಾದಳದ ಮಂಗಳೂರು ಉತ್ತರ ಘಟಕಾಧ್ಯಕ್ಷ ರತೀಶ್ ಕರ್ಕೇರ, ಮಂಗಳೂರು ಉತ್ತರ ಉಪಾಧ್ಯಕ್ಷ ಹಿತೇಶ್ ರೈ, ಯುವ ಜನತಾದಳ ಉಪಾಧ್ಯಕ್ಷ  ಮುಹಮ್ಮದ್ ಆಸಿಫ್, ಸತ್ತಾರ್ ಬಂದರ್, ಪ್ರದೀಪ್, ರೋಹಿತ್, ಶ್ರೀನಾಥ್ ಪೂಜಾರಿ ಹಾಗೂ ಹಲವು ಕಾರ್ಯಕರ್ತರು ಪಾಲ್ಗೊಂಡಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments