ವಾಶಿಂಗ್ಟನ್(ಜ.27): ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಇತ್ತೀಚೆಗಷ್ಟೇ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬಳಿಕ ಡೋನಾಲ್ಡ್ ಟ್ರಂಪ್ ತೆಗೆದುಕೊಂಡಿದ್ದ ಹಲವು ನಿರ್ಧಾರಗಳನ್ನು ಬದಲಿಸಿ, ಹೊಸ ಆದೇಶ ಹೊರಡಿಸಿದ್ದಾರೆ. ಇದೀಗ 6.50 ಲಕ್ಷ ಸರ್ಕಾರಿ ವಾಹನಗಳನ್ನು ಬದಲಿಸಿ ಹೊಸ ವಾಹನ ಖರೀದಿಗೆ ಮುಂದಾಗಿದ್ದಾರೆ.
ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!.
ಜೋ ಬೈಡೆನ್ ತೆಗೆದುಕೊಂಡ ಕೆಲ ಪ್ರಮುಖ ನಿರ್ಧಾರಗಳಲ್ಲಿ ಇದು ಕೂಡ ಒಂದಾಗಿದೆ. ಕಾರಣ 6.50 ಲಕ್ಷ ಸರ್ಕಾರಿ ವಾಹನ ಬದಲಿಸಿ ಇದೀಗ ಅಮೆರಿಕದಲ್ಲಿ ಉತ್ಪಾದನೆಯಾಗಿರುವ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಬೈಡನ್ ಸರ್ಕಾರ ಮುಂದಾಗಿದೆ. ಈ ಮೂಲಕ ಗ್ರೀನ್ ಎನರ್ಜಿ ಉತ್ತಜಿಸಲು, ಮಾಲಿನ್ಯ ತಗ್ಗಿಸಲು ಅಮೆರಿಕ ಮುಂದಾಗಿದೆ.