Monday, September 26, 2022
HomeUncategorizedನಾಯಿಯನ್ನ ಅಟ್ಟಾಡಿಸಿಕೊಂಡು ಹೋದ ಚಿರತೆ ಟಾಯ್ಲೆಟ್ ನಲ್ಲಿ ಬಂಧಿ…!!!

ನಾಯಿಯನ್ನ ಅಟ್ಟಾಡಿಸಿಕೊಂಡು ಹೋದ ಚಿರತೆ ಟಾಯ್ಲೆಟ್ ನಲ್ಲಿ ಬಂಧಿ…!!!

- Advertisement -
Renault

Renault

Renault

Renault


- Advertisement -

ಕಡಬ: ಸಾಕು ನಾಯಿಯನ್ನು ಅಟ್ಟಿಸಿಕೊಂಡು ಬಂದ ಚಿರತೆಯೊಂದು ಸಾಕು ನಾಯಿಯ ಜೊತೆ ಮನೆಯ ಶೌಚಾಲಯದಲ್ಲಿ ಬಂಧಿಯಾದ ಘಟನೆ ಇಂದು ಬೆಳಿಗ್ಗೆ ಕಡಬದ ಕೈಕಂಬದಲ್ಲಿ ನಡೆದಿದೆ.

ಸುಬ್ರಹ್ಮಣ್ಯ ಸಮೀಪದ ಕೈಕಂಬ ನಿವಾಸಿ ರೇಗಪ್ಪ ಎಂಬವರ ಮನೆಯ ಸಮೀಪ ಸಾಕು ನಾಯಿಯನ್ನು ಚಿರತೆಯೊಂದು ಅಟ್ಟಿಸಿಕೊಂಡು ಬಂದಿದೆ.

ತಪ್ಪಿಸಿಕೊಳ್ಳುವ ಭರದಲ್ಲಿ ಸಾಕುನಾಯಿ ಮನೆಯ ಹೊರಗಿದ್ದ ಶೌಚಾಲಯಕ್ಕೆ ಹೊಕ್ಕಿದ್ದು, ಚಿರತೆಯು ನಾಯಿಯನ್ನು ಹಿಂಬಾಲಿಸಿ ಶೌಚಾಲಯದ ಒಳಗೆ ಬಂದಿದೆ. ಇದನ್ನು ಗಮನಿಸಿದ ಮನೆಯವರು ಹೊರಗಿನಿಂದ ಶೌಚಾಲಯದ ಬಾಗಿಲನ್ನು ಹಾಕಿದ್ದು, ಇದೀಗ ನಾಯಿ ಮತ್ತು ಚಿರತೆ ಎರಡೂ ಶೌಚಾಲಯದ ಒಳಗೆ ಬಂಧಿಯಾಗಿದೆ. ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಇನ್ನಷ್ಟೇ ಕಾರ್ಯಾಚರಣೆ ನಡೆಯಬೇಕಿದೆ.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments