- Advertisement -
ಕಡಬ: ಮರವೇರಿ ಕುಳಿತಿರುವ ಚಿರತೆಯನ್ನು ಸೆರೆ ಹಿಡಿಯಲು ಭರದ ಸಿದ್ಧತೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ನಸುಕಿನ ಜಾವ ಇಬ್ಬರ ಮೇಲೆ ದಾಳಿ ನಡೆಸಿರುವ ಚಿರತೆಯನ್ನು ಸೆರೆ ಹಿಡಿಯಲು ಭರದ ಸಿದ್ಧತೆ ನಡೆಯುತ್ತಿದೆ.
ಸದ್ಯ ಮಾಹಿತಿ ಪ್ರಕಾರ ಚಿರತೆ ತೋಟದೊಳಗಿನಿಂದ ಮರವನ್ನೇರಿ ಕುಳಿತಿದೆ ಎನ್ನಲಾಗಿದೆ. ಚಿರತೆ ಸೆರೆ ಹಿಡಿಯಲು ವಿವಿಧ ತಯಾರಿಗಳನ್ನು ಸಿದ್ಧಪಡಿಸಲಾಗಿದೆ.
ಸ್ಥಳಕ್ಕೆ ಎಸಿಎಫ್ ಆಸ್ಟೀನ್ ಪಿ. ಸೋನ್ಸ್, ರೇಂಜರ್ ರಾಘವೇಂದ್ರ, ಮಂಜುನಾಥ್, ಅಧಿಕಾರಿಗಳು, ಸಿಬ್ಬಂದಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಂಡಿದ್ದಾರೆ.