Tuesday, September 28, 2021
Homeಕರಾವಳಿಮುಂದಿನವಾರ ಕಂಬಳ ಓಟಗಾರರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ

ಮುಂದಿನವಾರ ಕಂಬಳ ಓಟಗಾರರ ತರಬೇತಿ ಶಿಬಿರಕ್ಕೆ ಆಯ್ಕೆ ಪ್ರಕ್ರಿಯೆ

- Advertisement -
Renault
- Advertisement -
Home Plus
- Advertisement -

ಮೂಡುಬಿದಿರೆ : ಕಂಬಳ ಅಕಾಡೆಮಿಯ ವತಿಯಿಂದ ನಡೆಯುವ 2020-2021ನೇ ಸಾಲಿನ ಓಟಗಾರರ ತರಬೇತಿ ಶಿಬಿರವು ಸೆಪ್ಟೆಂಬರ್ 19 ರಂದು ಆರಂಭಗೊಳ್ಳಲಿದ್ದು ಅದಕ್ಕಾಗಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಸೆಪ್ಟೆಂಬರ್ 7 ರಂದು ನಡೆಯಲಿದೆ ಎಂದು ಅಕಾಡೆಮಿಯ ನಿರ್ದೇಶಕರ ಮಂಡಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 6 ನೇ ವರ್ಷದ ವಾರ್ಷಿಕ ತರಬೇತಿ ಶಿಬಿರಕ್ಕೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಮೂಡುಬಿದಿರೆಯ ವೀರರಾಣಿ ಅಬ್ಬಕ್ಕ ಸಂಸ್ಕೃತಿ ಗ್ರಾಮ ಕೋಟಿ-ಚೆನ್ನಯ ಕಂಬಳ ಕ್ರೀಡಾಂಗಣ ಆವರಣದಲ್ಲಿ ಬೆಳಗ್ಗೆ 9 ಗಂಟೆಗೆ ನಡೆಯಲಿದೆ.

ಇದಕ್ಕೆ ಅಭ್ಯರ್ಥಿಗಳು ಹೊಂದಿರಬೇಕಾದ ಅರ್ಹತೆಗಳೆಂದರೆ, ಕೃಷಿ ಹಿನ್ನಲೆ ಹೊಂದಿದವರಾಗಿದ್ದು ಹೊಲ ಉಳುಮೆಯ ಅನುಭವ ಪಡೆದಿರಬೇಕು, 18 ವರ್ಷದಿಂದ 25 ವರ್ಷದ ವಯಸ್ಸಿನ ಒಳಗಿನವರಾಗಿರಬೇಕು. ಕೋವಿಡ್-19 ರ ಸರಕಾರದ ನಿಯಮಾವಳಿ ಕನಿಷ್ಠ ಒಂದು ಲಸಿಕೆಯನ್ನು ಪಡೆದಿರಬೇಕು, ಆಧಾರ್ ಕಾರ್ಡ್ ನಕಲು ಹಾಗೂ ಪಾಸ್ ಪೋರ್ಟ್ ಅಳತೆಯ 2 ಭಾವಚಿತ್ರ ತರಬೇಕು, ಅಭ್ಯರ್ಥಿಯು ಟಿ-ಶರ್ಟ್ ಮತ್ತು ಶಾರ್ಟ್ಸ್ ಹೊಂದಿರುವುದು ಕಡ್ಡಾಯವಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಕೆ.ಗುಣಪಾಲ ಕಡಂಬ – 8197331272 ಅಥವಾ ಸುರೇಶ್ ಕೆ ಪೂಜಾರಿ 9060734499 ಅವರನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಲಾಗಿದೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments