Sunday, June 4, 2023
Homeಕರಾವಳಿರ್ಯಾಗಿಂಗ್ ಪ್ರಕರಣ: 11 ವಿದ್ಯಾರ್ಥಿಗಳಿಗೆ ಜಾಮೀನು

ರ್ಯಾಗಿಂಗ್ ಪ್ರಕರಣ: 11 ವಿದ್ಯಾರ್ಥಿಗಳಿಗೆ ಜಾಮೀನು

- Advertisement -


Renault

Renault
Renault

- Advertisement -

ಮಂಗಳೂರು, ಫೆ.13 : ರ್‍ಯಾಗಿಂಗ್ ಆರೋಪದಲ್ಲಿ ಬಂಧಿತರಾಗಿದ್ದ ದೇರಳಕಟ್ಟೆ ಖಾಸಗಿ ಕಾಲೇಜಿನ 11 ಮಂದಿ ವಿದ್ಯಾರ್ಥಿಗಳಿಗೆ ಮಂಗಳೂರು ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ‌. 

ಕಾಲೇಜಿನ ಎರಡನೇ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ 18 ವಿದ್ಯಾರ್ಥಿಗಳು ರ್‍ಯಾಗಿಂಗ್ ಮಾಡಿದ್ದ ಬಗ್ಗೆ ಕಾಲೇಜಿನ ಆಡಳಿತ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ವಿದ್ಯಾರ್ಥಿಗಳಾದ ಕೇರಳದ ಕ್ಯಾಲಿಕಟ್‌ನ ಪಾಳಿಯಾಡ್ ನಿವಾಸಿ ಮುಹಮ್ಮದ್ ಶಮ್ಮಾಸ್ (19), ಕೊಟ್ಟಾಯಂ ವೈಕಂ ನಿವಾಸಿ ಅಕ್ಷಯ್ ಕೆ.ಎಸ್. (19), ಕೊಟ್ಟಾಯಂ ಅಯರ್ ಕುನ್ನ ರೋಬಿನ್ ಬಿಜು (20), ಕಾಸರಗೋಡು ಉಳ್ಳೂರಿನ ಅಬ್ದುಲ್ ಅನಾಸ್ (21), ಚಿಟ್ಟಾರಿಕಲ್ ಜೆಫಿನ್ ರೋಯಿಚನ್ (19), ಕೊಟ್ಟಾಯಂನ ಅಲ್ವಿನ್ ಜೋಯ್ (19), ಜೆರೋನ್ ಸಿರಿಲ್ (19), ಪತ್ತನಂತಿಟ್ಟ ನಿವಾಸಿ ಸೂರಜ್ (19), ಚೆಮ್ಮತ್ತೂರು ಆಸಿನ್ ಬಾಬು (19), ಮಲಪುರಂ ಜುಬಿನ್ ಮೆಹರೂಫ್ (21), ಅಬ್ದುಲ್ ಬಾಸಿತ್ (19) ಎಂಬವರನ್ನು ಬಂಧಿಸಿದ್ದರು.

ಬಂಧಿತ ವಿದ್ಯಾರ್ಥಿಗಳ ಪರ ವಕೀಲರಾದ ಮಹಮ್ಮದ್ ಅಸ್ಗರ್ ಮುಡಿಪು ಮತ್ತು ಆಸಿಫ್ ಬೈಕಾಡಿ ವಾದ ಮಂಡಿಸಿ ಒಂದೇ ದಿನದಲ್ಲಿ ಜಾಮೀನು ಸಿಗುವಂತೆ ಮಾಡಿದ್ದಾರೆ

- Advertisement -

LEAVE A REPLY

Please enter your comment!
Please enter your name here

Most Popular

Recent Comments