Sunday, June 4, 2023
Homeಕರಾವಳಿಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡ ಗುರುಪುರ ದ ಶಿಕ್ಷಣ ತಜ್ಞ

ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡ ಗುರುಪುರ ದ ಶಿಕ್ಷಣ ತಜ್ಞ

- Advertisement -


Renault

Renault
Renault

- Advertisement -

ಆತ್ಮೀಯರೂ, ಮಾರ್ಗದರ್ಶಕರೂ ಆಗಿರುವಂತಹ ಡಾ ಅನಂತ ಪ್ರಭು ಜಿ ಅವರಿಗೆ ಕರ್ನಾಟಕ ಸರಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಕೊಡಮಾಡುವ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷ ಮತ್ತು ಅರ್ಹರನ್ನ ಗುರುತಿಸಿ ಆಯ್ಕೆಮಾಡಿರುವ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕ್ರಮ ಅಭಿನಂದನಾರ್ಹ ಮತ್ತು ಎಡವದ ಆಯ್ಕೆಯೇ ಸರಿ.

ಸರಕಾರಕ್ಕೆ ಮತ್ತು ಸಮಾಜಕ್ಕೆ ಅವರು ಕೊಡುವ ಸೇವೆಯನ್ನ ಗುರುತಿಸಿ ಹುಡುಕಿ ಬಂದಿರುವ ಪುರಸ್ಕಾರವಿದು. Karnataka Police Academy , Karnataka Judicial Academy ಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಇವರಿಗೆ ಮತ್ತೊಂದು ಜವಾಬ್ದಾರಿ ಹೆಗಲಿಗೆ ಎಂಬಂತೆ ವಿಮಾನ ನಿಲ್ದಾಣಗಳ (CISF) ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ತರಬೇತಿಯನ್ನಾರಂಬಿಸಿ ರುವುದು ಸಂತಸದ ಸಂಗತಿ.

ಸಹ್ಯಾದ್ರಿ ತಾಂತ್ರಿಕ ವಿಧ್ಯಾಲಯದ ಪ್ರಾಧ್ಯಾಪಕರಾಗಿ 2019 ರಂದ ಸೇವೆ ಸಲ್ಲಿಸುತ್ತಿರುವ ಇವರು Sure Pass ಎಂಭ ವಿಧ್ಯಾ ಸಂಸ್ಥೆಯನ್ನೂ ಹೊಂದಿರುತ್ತಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಅವರ ಸಮಾನ ಮನಸ್ಥಿತಿಯ ಹೃದಯವಂತಿಕೆ ಮತ್ತು ಪ್ರೀತಿ ವಿಶ್ವಾಸಕ್ಕೆ ಸಂದ ಪುರಸ್ಕಾರದಂತಿದೆ. ಈ ಸಂಧರ್ಭದಲ್ಲಿ ಪ್ರಶಸ್ತಿ ಸ್ವೀಕರಿಸಿದ ಎಲ್ಲಾ ಸಾಧಕರಿಗೂ ಶುಭವಾಗಲೀ , ಸರ್ವ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ???

ಪುರಸ್ಕಾರಗಳು ಸಾಧನೆಗಳ ಗುರಿಯ ತೊಟ್ಟಿಲುಗಳಲ್ಲ ಪುನಸ್ಕಾರಗಳು ಸಾಧಕರ ಗರಿಯ ಮೆಟ್ಟಿಲುಗಳು ಅಲ್ಲವೇ ?
Azzfar Razack
Mangalore varthe

- Advertisement -

LEAVE A REPLY

Please enter your comment!
Please enter your name here

Most Popular

Recent Comments