- Advertisement -
ಮೈಸೂರು: ಇಂದು ದರ್ಶನ್ ಫಾರ್ಮ್ ಹೌಸ್ ನಲ್ಲಿ ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ನಟ ದರ್ಶನ್ ಅವರನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ ಮನವಿ ಮಾಡಿದ್ದು, ಸಚಿವರ ಮನವಿಗೆ ಒಪ್ಪಿರುವಂತ ನಟ ದರ್ಶನ್ ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆಯ ರಾಯಭಾರಿಯಾಗಲು ಒಪ್ಪಿಕೊಂಡಿದ್ದಾರೆ.
ಈ ಕುರಿತು ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದ್ದು, ಮೈಸೂರಿನ ದರ್ಶನ್ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಭೇಟಿಯಾಗಿದ್ದೆ. ಕೆಲವೊತ್ತು ಕೃಷಿ ಇಲಾಖೆಯ ರಾಯಭಾರಿಯಾಗುವಂತೆ ಮನವಿ ಮಾಡಲಾಯಿತು. ಇಂತಹ ಮನವಿಗೆ ಪ್ರತಿಸ್ಪಂದಿಸಿರುವ ನಟ ದರ್ಶನ್, ಯಾವುದೇ ಸಂಭಾವನೇ ಇಲ್ಲದೇ ರಾಯಭಾರಿಯಾಗಲು ದರ್ಶನ್ ಒಪ್ಪಿಕೊಂಡಿರುವುದಾಗಿ ತಿಳಿಸಿದ್ದಾರೆ.