ಪಾಕಿಸ್ತಾನಿಗಳಿಗಿಂತ ಹೀನವಾದ್ವ ಗಡಿನಾಡ ತುಳುವರು…???
ಇಂದಿನಿಂದ ನಾವು ಕೂಡ ನುಸುಳುಕೋರರೆ…???
ದ.ಕ. ಜಿಲ್ಲಾಡಳಿತದ ವಿರುದ್ಧ ಗಡಿನಾಡಿನ ಜನತೆ ಆಕ್ರೋಶ…!!!
ಮಂಗಳೂರು: ಕೊರೊನಾ…ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ ಮಹಾಮಾರಿ ರೋಗ. ಈ ಮಹಾಮಾರಿಯಿಂದಾಗಿ ಜನ ಜೀವನವೇ ಕಂಗಾಲಾಗಿದೆ. ಈಗ್ಲೂ ಕೆಲವೊಂದು ದೇಶ ಆ ವೈರಸ್ ನಿಂದ ಚೇತರಿಸಿಕೊಳ್ಳಲು ಇನ್ನಿಲ್ಲದ ಲಾಕ್ಡೌನ್ ಗಳನ್ನೆಲ್ಲ ಮಾಡುತ್ತಿವೆ. ಆದ್ರೆ ಭಾರತದಲ್ಲಿ ಕೊರೊನಾವನ್ನ ಕಂಟ್ರೋಲ್ ಗೆ ತರಲು ಸಾಧ್ಯವಾಗಿದೆ. ಜೊತೆಗೆ ಕೆಲವೊಂದು ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಿ ಕೊರೊನಾ ನಿಯಂತ್ರಿಸಿದ್ದಾರೆ. ಆದ್ರೆ ಭಾರತದ ಕೆಲವೊಂದು ರಾಜ್ಯಗಳಲ್ಲಿ ಕೊರೊನಾದ ಆರ್ಭಟ ಇನ್ನೂ ನಿಂತಿಲ್ಲ.
ಹೌದು ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಎರಡನೇ ಅಲೆಯ ರುದ್ರನರ್ತನ ಆರಂಭವಾಗಿದೆ. ಇದರಿಂದಾಗಿ ಕರ್ನಾಟಕಕ್ಕೆ ಭಾರೀ ಭೀತಿ ಎದುರಾಗಿದೆ. ಹಾಗಾಗಿಯೇ ಕರ್ನಾಟಕದಲ್ಲೂ ಕೆಲವೊಂದು ಕ್ರಮಗಳನ್ನ ಜರುಗಿಸಲಾಗ್ತಾ ಇದೆ. ಅದರಲ್ಲಿ ಒಂದು ಕರ್ನಾಟಕದ ಗಡಿಗಳನ್ನ ಬಂದ್ ಮಾಡಿ ಕೊರೊನಾ ನಿಯಂತ್ರಣಕ್ಕೆ ತರುವಂತ ಕಾರ್ಯ. ಯಸ್ ಇದು ಎಷ್ಟರ ಮಟ್ಟಿಗೆ ಕೊರೊನಾವನ್ನ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತೆ ಅಂತ ಗೊತ್ತಿಲ್ಲ. ಆದ್ರೆ ಕೇರಳ- ಕರ್ನಾಟಕ ಗಡಿಗಳನ್ನ ಮುಚ್ಚುವುದರಿಂದ ಗಡಿನಾಡಿನ ಜನತೆ ಅಂತೂ ತೊಂದರೆಗೆ ಸಿಲುಕುತ್ತಾರೆ.
ಇನ್ನು ನೆರೆಯ ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಪ್ರವೇಶಿಸುವ ತಲಪಾಡಿ ಸಹಿತ 4 ಪ್ರಮುಖ ಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂತರ್ ರಾಜ್ಯ ಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಈಗಾಗ್ಲೇ ಆದೇಶ ಹೊರಡಿಸಿದ್ದಾರೆ. ಈ ಆದೇಶದಿಂದಾಗಿ ಗಡಿನಾಡಿನ ಜನತೆ ವ್ಯಾಪಕ ಆಕ್ರೋಶವನ್ನ ಹೊರಹಾಕಿದ್ದಾರೆ.
ಕೊರೊನಾವನ್ನ ನಿಯಂತ್ರಣಕ್ಕೆ ತರುವುದು ಸರಿ. ಆದ್ರೆ ಗಡಿಗಳನ್ನ ಮುಚ್ಚುವುದರಿಂದ ಏನು ಪ್ರಯೋಜನ ಎಂಬಂತ ರೀತಿಯಲ್ಲಿ ಗಡಿನಾಡಿನ ಜನತೆ ಆಕ್ರೋಶ ಹೊರಹಾಕ್ತಾ ಇದ್ದಾರೆ. ಇನ್ನು ತಲಪಾಡಿ, ಸಾರಡ್ಕ, ನೆಟ್ಟಣಿಗೆ ಮುಡ್ನೂರು -ಮೇನಾಲ ಮತ್ತು ಜಾಲ್ಸೂರಿನಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿದೆ. ಅಲ್ಲಿ ಆರೋಗ್ಯ ಇಲಾಖೆಯ ಒಂದು ತಂಡ ನಿಯೋಜಿಸಿ ವೈದ್ಯಕೀಯ ತಪಾಸಣೆ ಹಾಗೂ ಸ್ಕ್ರೀನಿಂಗ್ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಇದೆಲ್ಲ ಸರಿ, ಆದ್ರೆ ಸಂಚಾರ ನಿರ್ಬಂಧಿಸಿ ಗಡಿಗಳನ್ನ ಮುಚ್ಚುವುದರಿಂದ ಗಡಿನಾಡಿಗರು ಪಾಕಿಸ್ತಾನಿಗಳಿಗಿಂತ ಹೀನವಾದ್ವ..?? ಇಂದಿನಿಂದ ಹಾಗಾದ್ರೆ ನಾವು ನುಸುಳುಕೋರರೇ..??? ಎಂಬ ವಾದದಲ್ಲಿ ಗಡಿನಾಡಿಗರು ದ.ಕ. ಜಿಲ್ಲಾಡಳಿತದ ವಿರುದ್ಧ ಆಕ್ರೋಶವನ್ನ ಹೊರಹಾಕಿದ್ದಾರೆ. ಜೊತೆಗೆ ರಸ್ತೆ ಮುಚ್ಚುವುದೊಂದೇ ಕೊರೊನಾಕ್ಕೆ ಪರಿಹಾರ ಅಂದ್ರೆ ಅದು ಕೊರೊನಾಕ್ಕಿಂತಲೂ ದೊಡ್ಡ ಮನಸ್ಥಿತಿಯುಳ್ಳ ರೋಗ ಎಂದು ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.