- Advertisement -
ಬಾಗಲಕೋಟೆ : ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಸಬ್‍ಇನ್ಸಪೆಕ್ಟರಗಳ (ಸಿವಿಲ್) ಒಟ್ಟು 545 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತಾ ಷರತ್ತುಗಳನ್ನು ಪೂರೈಸುವ ಅಭ್ಯರ್ಥಿಗಳು ವೆಬ್‍ಸೈಟ್ ನಲ್ಲಿ ಜನವರಿ 22 ರಿಂದ ಫೆಬ್ರವರಿ 22 ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಶುಲ್ಕ ಪರಿಶಿಷ್ಟ ಜಾತಿ, ಪಂಗಡದ ವರ್ಗದವರಿಗೆ 250 ರೂ. ಮತ್ತು ಇತರರಿಗೆ 500 ರೂ.ಗಳಾಗಿರುತ್ತದೆ.
ಶುಲ್ಕ ಪಾವತಿಗ ಕೊನೆಯ ದಿನ ಫೆಬ್ರವರಿ 24 ಆಗಿದೆ ಎಂದು ಬಾಗಲಕೋಟೆ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.