Wednesday, February 1, 2023
Homeಕರಾವಳಿಕೇರಳ ಗಡಿ ಬಂದ್ ತಗಾದೆ: ಕೇಂದ್ರದ ಮಾರ್ಗಸೂಚಿ ನಿಯಮಗಳ ಉಲ್ಲಂಘಣೆ

ಕೇರಳ ಗಡಿ ಬಂದ್ ತಗಾದೆ: ಕೇಂದ್ರದ ಮಾರ್ಗಸೂಚಿ ನಿಯಮಗಳ ಉಲ್ಲಂಘಣೆ

- Advertisement -

Renault

Renault
Renault

- Advertisement -

ಕೊರೋನಾ ಕಾರಣ ನೀಡಿ ಕೇರಳ ಗಡಿ ಬಂದ್​ ಮಾಡಿರುವ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಇಂದು ಹೈ ಕೋರ್ಟ್​ನಲ್ಲಿ ನಡೆಯಿತು.
ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಈ ರೀತಿ ರಸ್ತೆ ಮುಚ್ಚುವುದು ಕೇಂದ್ರ ಸರ್ಕಾರದ ಮಾರ್ಗಸೂಚಿ ನಿಯಮಗಳ ಉಲ್ಲಂಘನೆ. ಅದಕ್ಕೆ ಬದಲಾಗಿ ವ್ಯಕ್ತಿಗಳ ಕೊರೋನಾ ಪರೀಕ್ಷೆಗೆ ಅಗತ್ಯ ಕ್ರಮಕೈಗೊಳ್ಳಬೇಕು. ಕೇಂದ್ರದ ಮಾರ್ಗಸೂಚಿ ಪ್ರಕಾರ ರಾಜ್ಯಗಳ ನಡುವೆ ಗೂಡ್ಸ್ ಮತ್ತು ಸಾರ್ವಜನಿಕರು ಒಡಾಟಕ್ಕೆ ನಿರ್ಭಂಧ ಇಲ್ಲ. ರಾಜ್ಯ ಸರ್ಕಾರ ಈಗ ಕೈಗೊಂಡಿರುವ ಕ್ರಮ, ಎಂಹೆಚ್‌ಎ ರೂಲ್ಸ್ ಕ್ಲಾಸ್ 8ರ ಉಲ್ಲಂಘನೆ ಎಂದು ಹೈಕೋರ್ಟ್ ಮೌಖಿಕ‌ ಅಭಿಪ್ರಾಯ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಕೇರಳ-ಕರ್ನಾಟಕ ಗಡಿಯನ್ನು ಮುಚ್ಚಿದ್ದು, ಇದನ್ನು ಪ್ರಶ್ನಿಸಿ ಗಡಿ ಭಾಗದ ಕೆಲ ಜನರು ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆ ಮಾಡಿದ್ದರು. ರಸ್ತೆ ಮುಚ್ಚಿರುವುದು 2 ರಾಜ್ಯದ ಗಡಿ ಭಾಗದ ನಿವಾಸಿಗಳಿಗೆ ಕಷ್ಟವಾಗಿದೆ. ಅವರ ಜೀವನ, ವಿದ್ಯಾಭ್ಯಾಸ, ಉದ್ಯಮ ಎಲ್ಲದಕ್ಕೂ ತೊಂದರೆಯಾಗ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದರು.

- Advertisement -

1 COMMENT

LEAVE A REPLY

Please enter your comment!
Please enter your name here

Most Popular

Recent Comments