- Advertisement -
ಮಂಗಳೂರು: ಸೌಹಾರ್ದ ಟ್ರೋಫಿ ಇದರ ಪ್ರಥಮ ವರ್ಷದ ಕ್ರಿಕೆಟ್ ಪಂದ್ಯಾಟ ಶಾಂತಿನಗರ ಗ್ರೀನ್ ಲಚ್ಚಿಲ್ ಮೈದಾನದಲ್ಲಿ ನಡೆಯಿತು. 8 ಓವರಿನ 11 ಜನರ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಂಗಳೂರಿನ ಬಲಿಷ್ಠ ತಂಡ ಕೆಎಫ್ ಸಿ ಕೋಡಿಕಲ್ 50 ಸಾವಿರ ನಗದು ಹಾಗೂ ಟ್ರೋಫಿಯನ್ನು ಪಡೆದುಕೊಂಡರು. ದ್ವಿತೀಯ ಸ್ಥಾನವನ್ನು ಅದೇ ಪರಿಸರದ ಬಲಾಡ್ಯ ತಂಡ ಸ್ಟಾರ್ ಕಾವೂರು 30 ಸಾವಿರ ನಗದು ಹಾಗೂ ಟ್ರೋಪಿಯನ್ನ ತನ್ನದಾಗಿಸಿಕೊಂಡಿತು.
ಈ ಪಂದ್ಯಾಟದ ಮುಖ್ಯ ತೀರ್ಪುಗಾರರಾಗಿ ಮಂಗಳೂರು ಕಂಡ ಶ್ರೇಷ್ಠ ತೀರ್ಪುಗಾರ ರೋಲನ್ ಪಿಂಟೊ ಹಾಗೂ ಆರಿಫ್ ಜೋಕಟ್ಟೆ ಕಾರ್ಯವನ್ನ ನಿರ್ವಹಿಸಿದರು.