ಖಾದರ್ ಬ್ರದರ್ ಇಫ್ತಿಕಾರ್ ಗೆ ಸೇರಿದ 5 ಬ್ಯಾಂಕ್ ಖಾತೆಗಳು ಸೀಝ್…!!!
ಅಬುದಾಬಿಯಿಂದ ಮಂಗಳೂರಿಗೆ ವಾಪಾಸಾಗುತ್ತಿರುವ ಇಫ್ತಿಕಾರ್…!!!
ಮಂಗಳೂರು: ಮಾಜಿ ಸಚಿವ ಯು.ಟಿ.ಖಾದರ್ ಸಹೋದರ ಡಾ.ಇಫ್ತಿಕಾರ್ ಮನೆ ಮೇಲೆ ಐಟಿ ದಾಳಿಯಾಗಿದ್ರೂ, ಸದ್ಯ ಖಾದರ್ ಸಹೋದರ ಇಫ್ತಿಕಾರ್ ಅಬುದಾಬಿಯಲ್ಲಿ ಇದ್ದಾರೆ. ಐಟಿ ದಾಳಿ ಬಗ್ಗೆ ಮಾಹಿತಿ ಪಡೆದ ಹಿನ್ನೆಲೆ ಇಫ್ತಿಕಾರ್ ಇದೀಗ ಅಬುದಾಬಿಯಿಂದ ವಾಪಾಸಾಗುತ್ತಿದ್ದಾರೆ. ಇಂದು ಮಧ್ಯಾಹ್ನದ ನಂತರ ಇಫ್ತಿಕಾರ್ ಮಂಗಳೂರು ತಲುಪುವ ಸಾಧ್ಯತೆ ಇದೆ. ಇನ್ನು ಇಫ್ತಿಕಾರ್ ಪತ್ನಿ ಕೂಡ ಹೈದರಾಬಾದ್ ನಲ್ಲಿ ಇರುವ ಬಗ್ಗೆ ಮಾಹಿತಿ ಇದೆ. ಐಟಿ ದಾಳಿ ಆದ ಬಳಿಕ ಇಫ್ತಿಕಾರ್ ಗೆ ಸೇರಿದ ಐದು ಬ್ಯಾಂಕ್ ಖಾತೆಗಳು ಸೀಝ್ ಆಗಿದೆ. ಸದ್ಯ ಲೈಟ್ ಹೌಸ್ ಹಿಲ್ ರಸ್ತೆಯ ಪ್ಲಾಟ್ ನಲ್ಲಿ ಐಟಿ ಅಧಿಕಾರ ಶೋಧ ಮುಂದುವರೆದಿದೆ.