ಮಧ್ಯರಾತ್ರಿ ತೋಟದಲ್ಲಿ ಅವಿತು ಕುಳಿತಿದ್ದ ‘ಚೀತಾ‘
ಕಡಬ: ಕಡಬ ತಾಲೂಕಿನ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಚಿರತೆಯೊಂದು ಜನರ ಮೇಲೆ ದಾಳಿ ಮಾಡಿದ ಬಗ್ಗೆ ವರದಿಯಾಗಿದೆ.
ನಸುಕಿನ ಜಾವ ರೆಂಜಿಲಾಡಿ ಗ್ರಾಮದ ಹೇರ ಎಂಬಲ್ಲಿ ಇಬ್ಬರ ಮೇಲೆ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ. ಗಾಯಗೊಂಡವರನ್ನು ಶೇಖರ್ ಕಾಮತ್ ಹಾಗೂ ಸೌಮ್ಯ ಕಾಮತ್ ಎಂದು ಗುರುತಿಸಲಾಗಿದ್ದು, ಇವರು ರಾತ್ರಿ ವೇಳೆ ಅಡಿಕೆ ತೋಟದಲ್ಲಿ ನೀರಿನ ಜಟ್ ಚೆಂಜ್ ಮಾಡುವ ಸಮಯದಲ್ಲಿ ಈ ಘಟನೆ ನಡೆದಿದೆ. ಕಳೆದ ದಿನಗಳಲ್ಲಿ ಬಿಳಿನೆಲೆ ಗ್ರಾಮದಿಂದ ಅರಣ್ಯ ಇಲಾಖೆಯ ಬೇಜಾವಬ್ದಾರಿಯಿಂದ ತಪ್ಪಿಸಿಕೊಂಡ ಚಿರತೆ ಇದು ಎನ್ನಲಾಗಿದ್ದು, ಚಿರತೆಯು ದಾಳಿ ನಡೆಸಿದ ತೋಟದಲ್ಲೇ ಇದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.