Thursday, March 23, 2023
Homeರಾಜಕೀಯಬಿಜೆಪಿ-ಬಜರಂಗದಳ ಮುಸ್ಲಿಂ ದೇಶಗಳಿಂದ ಬರುವ ಪೆಟ್ರೋಲ್-ಡೀಸೆಲ್ ಬಳಕೆ ಬಿಡಲಿ ನೋಡೋಣ

ಬಿಜೆಪಿ-ಬಜರಂಗದಳ ಮುಸ್ಲಿಂ ದೇಶಗಳಿಂದ ಬರುವ ಪೆಟ್ರೋಲ್-ಡೀಸೆಲ್ ಬಳಕೆ ಬಿಡಲಿ ನೋಡೋಣ

- Advertisement -


Renault

Renault
Renault

- Advertisement -

ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಒಂದು ಸಾವಿರ ದಾಟಿದೆ. ಶಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 111 ರೂ. ಆಗಿದೆ. ಸಿಎಂ ಎಲ್ಲಿದ್ದಾರೆ?, ಸರ್ಕಾರ ಎಲ್ಲಿದೆ?, ಅದರ ಬಗ್ಗೆ ಮಾತನಾಡಲಿ ನೋಡೋಣ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.

ಕಲಬುರಗಿ: ರಾಜ್ಯದಲ್ಲಿ ಸರ್ಕಾರ ಸತ್ತುಹೋಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮೂಕ ಬಸವಣ್ಣ ಆಗಿದ್ದಾರೆ. ಭಜರಂಗದಳ ಸರ್ಕಾರಕ್ಕೆ ನಿರ್ದೇಶನ ನೀಡುತ್ತಿದೆ. ಇವರನ್ನು ನಿಯಂತ್ರಿಸಲಾಗುತ್ತಿಲ್ಲವೇಕೆ? ಎಂದು ಮಾಜಿ ಸಚಿವ, ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್, ಹಲಾಲ್ ನಂತರ ಈಗ ಮಸೀದಿಗಳ ಮೇಲಿನ ಮೈಕ್​ಗಳ ತೆರವಿಗೆ ಹಿಂದೂ ಪರ ಸಂಘಗಳು ಒತ್ತಾಯಿಸುತ್ತಿವೆ. ಮಸೀದಿಗಳ ಮೇಲಿನ ಮೈಕ್ ಬಳಿಕೆಗೆ ವಾಯುವ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸುಪ್ರೀಂಕೋರ್ಟ್ ಕೆಲವೊಂದು ನಿಯಮಗಳನ್ನು ರೂಪಿಸಿದೆ. ಇದು ಮಂದಿರ ಹಾಗೂ ಚರ್ಚುಗಳಿಗೂ ಕೂಡ ಅನ್ವಯಿಸುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರಲಿ ಎಂದರು.

ಮೈಕ್​ಗಳ ವಿಚಾರವನ್ನು ಮುಂದಿಟ್ಟುಕೊಂಡು ಭಜರಂಗದಳ ಮಾತನಾಡುತ್ತಿದೆ. ಎಲ್ಲವನ್ನೂ ಮಾತನಾಡಲು ಇವರು ಯಾರು?. ಯಾರು ಹಲಾಲ್ ಪ್ರಮಾಣಪತ್ರ ತಗೊಂಡಿಲ್ಲ ಹೇಳಿ?. ಅಂಬಾನಿ ತಗೊಂಡಿಲ್ವಾ?. ಅದು ವ್ಯಾಪಾರ ಅದರ ಪಾಡಿಗೆ ಬಿಟ್ಟುಬಿಡಲಿ. ಪೆಟ್ರೋಲ್, ಡೀಸೆಲ್ ದರ ಗಗನಕ್ಕೇರಿದೆ. ಅಡುಗೆ ಅನಿಲ ಬೆಲೆ ಒಂದು ಸಾವಿರ ದಾಟಿದೆ. ಶಿರಸಿಯಲ್ಲಿ ಒಂದು ಲೀಟರ್ ಪೆಟ್ರೋಲ್​ಗೆ 111 ರೂ. ಆಗಿದೆ. ಸಿಎಂ ಎಲ್ಲಿದ್ದಾರೆ?, ಸರ್ಕಾರ ಎಲ್ಲಿದೆ?, ಅದರ ಬಗ್ಗೆ ಮಾತನಾಡಲಿ ನೋಡೋಣ ಎಂದು ಕಿಡಿಕಾರಿದರು.’ಬಿಜೆಪಿ-ಭಜರಂಗ ದಳದವದರು ಮುಸ್ಲಿಂ ದೇಶಗಳಿಂದ ಬರುತ್ತಿರುವ ಪೆಟ್ರೋಲ್-ಡೀಸೆಲ್​ ಹಾಕಿಸುವುದು ಬಿಡಲಿ ನೋಡೋಣ’

ತೈಲ ಹಾಕಿಸುವುದು ನಿಲ್ಲಿಸಿ: ಬಿಜೆಪಿ ಹಾಗೂ ಭಜರಂಗದಳದ ಕಾರ್ಯಕರ್ತರು ಮುಸ್ಲಿಂ ದೇಶಗಳಿಂದ ಆಮದಾಗುತ್ತಿರುವ ಪೆಟ್ರೋಲ್, ಡೀಸೆಲ್​ ಹಾಕಿಸಿಕೊಳ್ಳುವುದನ್ನು ನಿಲ್ಲಿಸುವ ಮೂಲಕ ನೈಜ ಹಿಂದುತ್ವವನ್ನು ಮೆರೆಯಲಿ ಎಂದು ಸವಾಲು ಎಸೆದ ಪ್ರಿಯಾಂಕ್, ಮುಖ್ಯಮಂತ್ರಿ ಬಸವಣ್ಣ ಮೂಕರಾಗಿರುವುದಕ್ಕೆ ಇದೆಲ್ಲಾ ನಡೆಯುತ್ತಿದೆ ಎಂದು ಟೀಕಿಸಿದರು.

ಸರ್ಕಾರ ವೈಫಲ್ಯ ಎದುರಿಸುತ್ತಿರುವಾಗ ಜನರು ನ್ಯಾಯಾಲಯಗಳ ಮೊರೆ ಹೋಗುತ್ತಾರೆ. ಸದ್ಯ ರಾಜ್ಯದಲ್ಲೂ ಇದೇ ಆಗುತ್ತಿದೆ. ಜನರು ನ್ಯಾಯಾಲಯಕ್ಕೆ ಹೋಗುವಂತ ಸ್ಥಿತಿ ನಿರ್ಮಾಣವಾದರೆ, ಸರ್ಕಾರ ಯಾಕೆ ಇರಬೇಕು? ವಿಧಾನಸಭೆ ಯಾಕಿರಬೇಕು.? ವಿಧಾನಸಭೆ ವಿಸರ್ಜನೆ ಮಾಡಿ‌ ಎಲ್ಲವನ್ನೂ ಕೇಶವ ಕೃಪಾಕ್ಕೆ ಕೊಟ್ಟುಬಿಡಲಿ ಎಂದು ವಾಗ್ದಾಳಿ ನಡೆಸಿದರು.

ಆರ್ಥಿಕವಾಗಿ ಸಬಲವಾಗಿದ್ದ ರಾಜ್ಯ ಏನಾಗುತ್ತಿದೆ?, ತೆಲಂಗಾಣ ಸಚಿವರೊಬ್ಬರು ಸಾಮಾಜಿಕ ಸಮಾನತೆಯ ವಾರವರಣ ಇದೆ, ಎಲ್ಲ ಕಂಪನಿಗಳು ಹೈದ್ರಾಬಾದ್​ಗೆ ಬನ್ನಿ ಎಂದು ಕರೆದಿದ್ದಾರೆ. ಬಿಜೆಪಿಗೆ ಹೇಳಿಕೊಳ್ಳುವಂತ ಸಾಧನೆ ಇಲ್ಲ. ಹಾಗಾಗಿ ಇದೆಲ್ಲವನ್ನು ಶುರು ಮಾಡಿದ್ದಾರೆ. ಸಿಎಂ ಸಂಘಪರಿವಾರದ ಕೈಗೊಂಬೆಯಾಗಿದ್ದಾರೆ. ಮೊಟ್ಟ ಮೊದಲಬಾರಿಗೆ ಸಚಿವ ಈಶ್ವರಪ್ಪ ಒಳ್ಳೆ ಮಾತನ್ನ ಹೇಳಿದ್ದಾರೆ. ಎಲ್ಲ ಧರ್ಮದ ಗುರುಗಳನ್ನು ಕರೆದು ಮಾತನಾಡಲಿ ಎಂದಿದ್ದಾರೆ ಅದನ್ನು ಸರ್ಕಾರ ಮಾಡಲಿ, ಅದು ವಿರೋಧಪಕ್ಷದ ಜವಾಬ್ದಾರಿಯಲ್ಲ ಎಂದು ಸರ್ಕಾರವನ್ನು ಛೇಡಿಸಿದರು.

ಎಚ್​​ಡಿಕೆ ಹೇಳಿಕೆಗೆ ಪ್ರತಿಕ್ರಿಯೆ: ಕಾಂಗ್ರೆಸ್ ಸಾಫ್ಟ್ ಹಿಂದುತ್ವ ಪಾಲಿಸುತ್ತಿದೆ ಎಂಬ ಜೆಡಿಎಸ್​​ ನಾಯಕ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಸಾಫ್ಟ್ ಹಿಂದುತ್ವ ಅಥವಾ ಸ್ಟ್ರಾಂಗ್ ಸೆಕ್ಯುಲರಿಸಂ ಅಂತಿಲ್ಲ. ಸಂವಿಧಾನಬದ್ಧ ಹಕ್ಕನ್ನು ಜನರಿಗೆ ತಲುಪಿಸು ಕೆಲಸ ಕಾಂಗ್ರೆಸ್ ಪಕ್ಷ ಮಾಡುತ್ತಲೇ ಬಂದಿದೆ. ಅದು ಹಾಗೆ ಮುಂದುವರೆಸುತ್ತದೆ.

- Advertisement -

1 COMMENT

  1. ನಮ್ಮ ಅಕ್ಕಿ ಗೋಧಿ ಈರುಳ್ಳಿ ಸಕ್ಕರೆ ಇತ್ಯಾದಿ ವಸ್ತು ನಮ್ಮಿಂದ ತೆಗೆದು ಕೊಳ್ಳುವುದು ಅವರು ಬಿಡುತ್ತಾರೆ ಆದರೆ ನಾವು ಪೆಟ್ರೋಲ್ ಪಡೆಯುವುದು ಬೇಡ. ಅವರು free ಏನು ಕೊಟ್ಟಿಲ್ಲ. ನೀವು ಎಲ್ಲಾ elected members ವಾಹನ ಗಳನ್ನು ವಾಪಸ್ ಕೊಟ್ಟು ಪಬ್ಲಿಕ್ transport ಉಪಯೋಗಿಸಿ. ಪರಿಸ್ಥಿತಿ ಎಲ್ಲಾ ಸುಧಾರಿಸುತ್ತದೆ

LEAVE A REPLY

Please enter your comment!
Please enter your name here

spot_img

Most Popular

Recent Comments