Sunday, September 24, 2023
HomeUncategorizedಆರೋಗ್ಯಕೊರೋನ 2ನೇ ಅಲೆ ತಪ್ಪಿಸಲು ಲಾಕ್ ಡೌನ್ ಅಗತ್ಯ: ಸಮಿತಿ..ಕನಿಷ್ಠ ಎರಡು ವಾರ ಬಂದ್ ಮಾಡಲು...

ಕೊರೋನ 2ನೇ ಅಲೆ ತಪ್ಪಿಸಲು ಲಾಕ್ ಡೌನ್ ಅಗತ್ಯ: ಸಮಿತಿ..ಕನಿಷ್ಠ ಎರಡು ವಾರ ಬಂದ್ ಮಾಡಲು ಸಲಹೆ

- Advertisement -



Renault

Renault
Renault

- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ 2ನೇ ಅಲೆ ಅಬ್ಬರಿಸುವ ಸಾಧ್ಯತೆ ಹಿನ್ನೆಲೆಯಲ್ಲಿ 2 ವಾರಗಳ ಕಾಲ ಲಾಕ್ ಡೌನ್ ಅಗತ್ಯ ಇದೆ ಎಂದು ಕೋವಿಡ್ ತಾಂತ್ರಿಕ ಸಮಿತಿ ಸರಕಾರಕ್ಕೆ ಸಲಹೆ ನೀಡಿದೆ.
ಈಗ ಶಾಲೆ, ಕಾಲೇಜುಗಳು ಆರಂಭಗೊಂಡಿರುವುದರಿಂದ ಎರಡನೇ ಅಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ತಗಲುವ ಸಾಧ್ಯತೆ ಇದೆ ಎಂದು ಉಲ್ಲೇಖಸಲಾಗಿದೆ.

ಈ ಹಿಂದೆ ಸೋಂಕು ಕಾಣಿಸಿಕೊಂಡವರಲ್ಲಿಯೇ ಮತ್ತೆ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಕೂಡಾ ಇದೆ ಎನ್ನಲಾಗಿದೆ.

ಶಾಲೆ, ಕಾಲೇಜು, ಜಿಮ್, ಆಟೋಟ ಚಟುವಟಿಕೆ, ಈಜುಕೊಳದಂತಹ ಸಾರ್ವಜನಿಕ ಸಂಚಾರದ ಸ್ಥಳಗಳು ಕೊರೊನಾ ಹರಡಲು ಕಾರಣವಾಗುತ್ತಿದೆ. ಕೊರೊನಾ ಸೋಂಕಿನ ವೇಗಕ್ಕೆ ಬ್ರೇಕ್ ಹಾಕಲು ಕನಿಷ್ಠ ಎರಡು ವಾರಗಳ ಕಾಲ ಲಾಕ್ ಡೌನ್ ಅಗತ್ಯ ಇದೆ ಎಂದು ಸಮಿತಿ ಸೂಚನೆಯನ್ನು ನೀಡಿದೆ.

ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳದೇ ಇದ್ರೆ ಕೊರೊನಾ ಸ್ಪೋಟಗೊಂಡು ಪರಿಸ್ಥಿತಿ ಕೈ ಮೀರಿ ಹೋಗುವ ಸಾಧ್ಯತೆಯಿದೆ. ಕೈ ಮೀರಿದ ಬಳಿಕ ಯಥಾಸ್ಥಿತಿ ಕಾಪಾಡುವುದು ಕಷ್ಟ ಎಂದು ಎಚ್ಚರಿಸಲಾಗಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಒಂದೂವರೆ ಸಾವಿರದ ಗಡಿ ದಾಟಿದ್ದು, ಮುಂದಿನ 10 ದಿನಗಳಲ್ಲಿ ಸೋಂಕಿತರ ಸಂಖ್ಯೆ 3,500ರ ಗಡಿ ದಾಟಲಿದೆ. ಇದರಿಂದ ಕಳೆದ ವರ್ಷದ ಸ್ಥಿತಿಯೇ ನಿರ್ಮಾಣವಾಗಲಿದೆ ಎನ್ನಲಾಗಿದೆ. ಶಾಲೆ, ಕಾಲೇಜು, ಹಾಸ್ಟೆಲ್, ಜಿಮ್, ಈಜುಕೊಳಗಳನ್ನು ಎರಡು ವಾರಗಳ ಕಾಲ ಬಂದ್ ಮಾಡಬೇಕಿದೆ. ಮದುವೆ, ಸಮಾರಂಭ, ಜಾತ್ರೆಗಳಿಗೆ ನಿರ್ಬಂಧವನ್ನು ಹೇರಬೇಕು. ಒಳಾಂಗಣ ಸಮಾರಂಭಕ್ಕೂ ಜನರನ್ನು ನಿಗದಿ ಮಾಡಬೇಕು.
ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರವೇ ಅವಕಾಶ ನೀಡಬೇಕು.

ಕೊರೋನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ಎಲ್ಲಾ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.

- Advertisement -

7 COMMENTS

  1. Government has opened schools and colleges he does not have concern on his citizens so shame of him. I feel so disgusting to say that he will kill his citizens because he did same in Covid 19 many people lost their lives now also he is neglecting 2nd wave. He will destroy the country

    Yes geetha mam we agree with you. I am feeling ashamed to have such irresponsible government

  2. Y govt. Is so irresponsible he does not have concern on his people only he is saying bahe baheno(brothers,sisters ). Then going nothing if we where his brothers and sisters then will he allow his brothers or sisters to die??

  3. ಕೊರೊನಾ ಸೋಂಕಿನ ವೇಗಕ್ಕೆ ಬ್ರೇಕ್ ಹಾಕಲು ಕನಿಷ್ಠ ಎರಡು ವಾರಗಳ ಕಾಲ ಲಾಕ್ ಡೌನ್ ಅಗತ್ಯ ಇದೆ ಎಂದು ಸಮಿತಿ ಸೂಚನೆಯನ್ನು ನೀಡಿದೆ.

    Who will give us money to live our life. Will govement give us food?

LEAVE A REPLY

Please enter your comment!
Please enter your name here

Most Popular

Recent Comments