Tuesday, September 27, 2022
Homeಇವೆಂಟ್ಸ್ಮೈಸೂರಲ್ಲಿ ಮಹಾರಾಜ ಟ್ರೋಫಿ ಕ್ರಿಕೆಟ್ ಸಂಭ್ರಮ !!!

ಮೈಸೂರಲ್ಲಿ ಮಹಾರಾಜ ಟ್ರೋಫಿ ಕ್ರಿಕೆಟ್ ಸಂಭ್ರಮ !!!

- Advertisement -
Renault

Renault

Renault

Renault






- Advertisement -

ಮೈಸೂರು: ಕೋವಿಡ್ ಕಾರಣದಿಂದ ಕೋವಿಡ್‌ನಿಂದ ಕಳೆದ ಎರಡು ವರ್ಷ ಸ್ಥಗಿತಗೊಂಡಿದ್ದ, ಕರ್ನಾಟಕ ಪ್ರೀಮಿಯರ್‌ ಲೀಗ್‌(ಕೆಪಿಎಲ್‌)ನ ಹೊಸ ಅವತರಣಿಕೆಯಾದ ‘ಮಹಾರಾಜ ಟ್ರೋಫಿ ಟಿ-20 ಕ್ರಿಕೆಟ್‌’ ಟೂರ್ನಿಗೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ವತಿಯಿಂದ ಮಾನಸ ಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ಆ.7ರಿಂದ 15ರವರೆಗೆ ನಿತ್ಯ 2 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ಮಧ್ಯಾಹ್ನ 3ಕ್ಕೆ ಮತ್ತು 2ನೇ ಪಂದ್ಯ ಸಂಜೆ 7ಕ್ಕೆ ಆರಂಭಗೊಳ್ಳಲಿದೆ. 8 ದಿನಗಳವರೆಗೆ 16 ಪಂದ್ಯಗಳು ಇಲ್ಲಿ ನಡೆಯಲಿವೆ.

ಮೊದಲ ದಿನ, ಹುಬ್ಬಳ್ಳಿ ಟೈಗರ್ಸ್‌-ಮಂಗಳೂರು ಯುನೈಟೆಡ್‌ ಮತ್ತು ಮೈಸೂರು ವಾರಿಯರ್ಸ್‌-ಶಿವಮೊಗ್ಗ ಸ್ಟ್ರೈಕರ್ಸ್ ಸೆಣೆಸಲಿವೆ. ಇದಕ್ಕಾಗಿ ಮೂರು ಪಿಚ್ ಸಿದ್ಧಪಡಿಸಲಾಗಿದೆ. ಕ್ರಿಕೆಟ್‌ ಹಬ್ಬ ಕಣ್ತುಂಬಿಕೊಳ್ಳಲು ಇಲ್ಲಿನ ಕ್ರೀಡಾಪ್ರೇಮಿಗಳು ಕಾತರದಿಂದಿದ್ದಾರೆ.

ಖ್ಯಾತರಾದ ಮನೀಷ್‌ ಪಾಂಡೆ, ಮಯಾಂಕ್ ಅಗರ್ವಾಲ್, ಜೆ.ಸುಚಿತ್, ಶ್ರೇಯಸ್ ಗೋಪಾಲ್, ಕೆ.ಗೌತಮ್, ದೇವದತ್ ಪಡಿಕಲ್, ಕರುಣ್ ನಾಯರ್, ಅಭಿನವ್ ಮನೋಹರ್, ಕೆಸಿ ಕಾರ್ಯಪ್ಪ, ಪ್ರವೀಣ್ ದುಬೆ, ಅಭಿಮನ್ಯು ಮಿಥುನ್ ಮೊದಲಾದವರು ಟೂರ್ನಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಆ.7ರಂದು ಮಧ್ಯಾಹ್ನ 2ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು, ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮತ್ತು ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.

‘ಪ್ರೇಕ್ಷಕರಿಗಾಗಿ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಮೈದಾನದಲ್ಲಿ 2 ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗಿದೆ’ ಎಂದು ಕೆಎಸ್‌ಸಿಎ ಮೈಸೂರು ವಲಯದ ಸಂಚಾಲಕ ಸುಧಾಕರ್ ರೈ ಮಾಹಿತಿ ನೀಡಿದರು.

ತಂಡಗಳು ಮೈಸೂರಿಗೆ ಆಗಮಿಸಿವೆ. ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ಹುಬ್ಬಳ್ಳಿ ತಂಡಗಳ ಆಟಗಾರರು ಶನಿವಾರ ಅಭ್ಯಾಸ ನಡೆಸಿದರು.

ನಗರದಲ್ಲಿ ಇನ್ನೂ 2-3 ದಿನ ಮಳೆಯಾಗುವ ಮುನ್ಸೂಚನೆ ಇದ್ದು, ಪಂದ್ಯಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಮಹಾರಾಜ ಟ್ರೋಫಿ: ಮೊದಲ ಹಂತದ ಪಂದ್ಯಗಳು

ದಿನಾಂಕ; ಪಂದ್ಯ;ಸಮಯ

ಆ.7;ಹುಬ್ಬಳ್ಳಿ ಟೈಗರ್ಸ್‌- ಮಂಗಳೂರು ಯುನೈಟೆಡ್‌;ಮಧ್ಯಾಹ್ನ 3

ಆ.7;ಮೈಸೂರು ವಾರಿಯರ್ಸ್‌-ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.8;ಬೆಂಗಳೂರು ಬ್ಲಾಸ್ಟರ್ಸ್- ಗುಲ್ಬರ್ಗ ಮಿಸ್ಟಿಕ್ಸ್;ಮಧ್ಯಾಹ್ನ 3

ಆ.8;ಮೈಸೂರು ವಾರಿಯರ್ಸ್‌- ಮಂಗಳೂರು ಯುನೈಟೆಡ್‌;ಸಂಜೆ 7

ಆ.9;ಗುಲ್ಬರ್ಗ ಮಿಸ್ಟಿಕ್ಸ್- ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.9;ಬೆಂಗಳೂರು ಬ್ಲಾಸ್ಟರ್ಸ್‌- ಹುಬ್ಬಳ್ಳಿ ಟೈಗರ್ಸ್;ಸಂಜೆ 7

ಆ.10;ಮೈಸೂರು ವಾರಿಯರ್ಸ್- ಹುಬ್ಬಳ್ಳಿ ಟೈಗರ್ಸ್;ಮಧ್ಯಾಹ್ನ 3

ಆ.10;ಮಂಗಳೂರು ಯುನೈಟೆಡ್‌- ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.11;ಬೆಂಗಳೂರು ಬ್ಲಾಸ್ಟರ್ಸ್‌- ಮಂಗಳೂರು ಯುನೈಟೆಡ್‌;ಮಧ್ಯಾಹ್ನ 3

ಆ.11;ಮೈಸೂರು ವಾರಿಯರ್ಸ್- ಗುಲ್ಬರ್ಗ ಮಿಸ್ಟಿಕ್ಸ್;ಸಂಜೆ 7

ಆ.12;ಹುಬ್ಬಳ್ಳಿ ಟೈಗರ್ಸ್- ಗುಲ್ಬರ್ಗ ಮಿಸ್ಟಿಕ್ಸ್;ಮಧ್ಯಾಹ್ನ 3

ಆ.12;ಬೆಂಗಳೂರು ಬ್ಲಾಸ್ಟರ್ಸ್‌- ಶಿವಮೊಗ್ಗ ಸ್ಟ್ರೈಕರ್ಸ್;ಸಂಜೆ 7

ಆ.13;ಹುಬ್ಬಳ್ಳಿ ಟೈಗರ್ಸ್- ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.13;ಮೈಸೂರು ವಾರಿಯರ್ಸ್- ಬೆಂಗಳೂರು ಬ್ಲಾಸ್ಟರ್ಸ್‌;ಸಂಜೆ 7

ಆ.14;ಮೈಸೂರು ವಾರಿಯರ್ಸ್- ಶಿವಮೊಗ್ಗ ಸ್ಟ್ರೈಕರ್ಸ್;ಮಧ್ಯಾಹ್ನ 3

ಆ.14;ಗುಲ್ಬರ್ಗ ಮಿಸ್ಟಿಕ್ಸ್- ಮಂಗಳೂರು ಯುನೈಟೆಡ್‌;ಸಂಜೆ 7

ಆ.15;ಮಂಗಳೂರು ಯುನೈಟೆಡ್‌- ಬೆಂಗಳೂರು ಬ್ಲಾಸ್ಟರ್ಸ್;ಮಧ್ಯಾಹ್ನ 3

ಆ.15;ಗುಲ್ಬರ್ಗ ಮಿಸ್ಟಿಕ್ಸ್- ಹುಬ್ಬಳ್ಳಿ ಟೈಗರ್ಸ್;ಸಂಜೆ 7

ಸ್ಥಳ: ಮೈಸೂರಿನ ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣ

- Advertisement -






LEAVE A REPLY

Please enter your comment!
Please enter your name here

- Advertisment -

Most Popular

Recent Comments