ಮಂಡ್ಯ: ಜಿಲ್ಲೆಯ ಕಾಲೇಜಿನಲ್ಲಿ ಹಿಜಾಬ್ ವರ್ಸಸ್ ಕೇಸರಿ ಶಾಲು ಸಂಘರ್ಷದ ಸಂದರ್ಭದಲ್ಲಿ ಏಕಾಂಗಿಯಾಗಿ ಹಿಜಾಬ್ ಧರಿಸಿ ( Hijab Row ) ಬಂದಿದ್ದಂತ ಮುಸ್ಕಾನ್ ಎಂಬ ವಿದ್ಯಾರ್ಥಿನಿಯ, ನೂರಾರು ವಿದ್ಯಾರ್ಥಿಗಳ ನಡುವೆ ಕಾಲೇಜಿಗೆ ತೆರಳಿದ್ದರು.
ಆಕೆಯನ್ನು ಕೇಸರಿ ಶಾಲು ಧರಿಸಿದ್ದಂತ ವಿದ್ಯಾರ್ಥಿಗಳು ಅಡ್ಡಿಪಡಿಸಿದಾಗ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದರು. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ( Social Media ) ವೈರಲ್ ಕೂಡ ಆಗಿತ್ತು. ಈ ವಿದ್ಯಾರ್ಥಿನಿ ಮನೆಗೆ ಮಹಾರಾಷ್ಟ್ರ ಶಾಸಕರು ( Maharastra MLA ) ಭೇಟಿ ನೀಡಿ, ಐಪೋನ್ ( iPhone ), ಸ್ಮಾರ್ಟ್ ವಾಚ್ ( Smart Watch ) ಗಿಫ್ಟ್ ನೀಡಿದ್ದಾರೆ.
ಮಂಡ್ಯದ ಗುತ್ತಲು ಬಡಾವಣೆಯಲ್ಲಿರುವಂತ ಮುಸ್ಕಾನ್ ವಿದ್ಯಾರ್ಥಿಯ ನಿವಾಸಕ್ಕೆ ದೂರ ಮಹಾರಾಷ್ಟ್ರದ ಬಾಂದ್ರ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೀಶನ್ ಸಿದ್ಧಿಕ್ ಭೇಟಿ ನೀಡಿದರು. ಕೇಸರಿ ಶಾಲು ಧರಿಸಿದ್ದ ನೂರಾರು ವಿದ್ಯಾರ್ಥಿಗಳ ಮುಂದೆ ಘೋಷಣೆ ಕೂಗಿದಂತ ಮುಸ್ಕಾನ್ ಗೆ ಧೈರ್ಯ ಹೇಳಿದಂತ ಅವರು, ನಿಮ್ಮ ಜೊತೆಗೆ ನಾವೆಲ್ಲಾ ಇರೋದಾಗಿ ಭರವಸೆ ನೀಡಿದರು. ಅಲ್ಲದೇ ಮುಸ್ಕಾನ್ ಗೆ ಐಪೋನ್ ಹಾಗೂ ಸ್ಮಾರ್ಟ್ ವಾಚ್ ಉಡುಗೋರೆಯಾಗಿ ನೀಡಿದರು.
ಈ ಬಳಿಕ ಮಾತನಾಡಿದಂತ ಅವರು, ಈ ಬಗ್ಗೆ ನನಗೆ ಗೊತ್ತಾಯ್ತು. ಆಗ ತುಂಬಾ ಗರ್ವ ಅನಿಸ್ತು. ಅಷ್ಟು ಜನ ಅವರ ಎದುರು ಇದ್ದರೂ ಅಲ್ಲಾಹು ಅಕ್ಬರ್ ಅಂತಾ ಕೂಗಿದ್ದಾರೆ. ಹಿಜಾಬ್ ಹಾಕಿಕೊಳ್ಳೋದು ಅವರ ಹಕ್ಕು. ಅವರ ಹಕ್ಕಿನ ಬಗ್ಗೆ ಧೈರ್ಯದಿಂದ ಧನಿ ಎತ್ತಿದ್ದಾರೆ. ಮಂಡ್ಯದಿಂದ ಇಂಡಿಯಾವರೆಗೂ ಆಕೆ ಬಗ್ಗೆ ಗರ್ವ ಪಡುತ್ತೆ. ಎಲ್ಲಾ ಮಹಿಳೆಯರು ಈಕೆ ರೀತಿ ಧೈರ್ಯದಿಂದ ಸಮಾಜ ಎದುರಿಸಬೇಕು ಎಂದು ಹೇಳಿದರು.
ನಿಜವಾಗಿಯೂ ಈ ಬಹುಮಾನಕ್ಕೆ ಹಿಂದೂ ವಿದ್ಯಾರ್ಥಿಗಳು ಅರ್ಹರು. ಆ ಉದ್ಧಟ ಹುಡುಗಿಗೆ ಏನೂ ತೊಂದರೆ ಕೊಡದೆ ಗೌರವದಿಂದ ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು. ಇದೇ ತರ ಓರ್ವ ಹಿಂದೂ ಹುಡುಗಿಯು ಬಾಂದ್ರಾದಲ್ಲಿ ವರ್ತಿಸಿದ್ದರೆ ಅವಳು ಜೀವಂತವಾಗಿ ಇರುತ್ತಿರಲಿಲ್ಲ. ಕೀಳು ರಾಜಕೀಯ.