Tuesday, June 6, 2023
HomeUncategorizedಆಸ್ಪತ್ರೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ತೆಗೆದ ಭೂಪ: ಬಂಧನ

ಆಸ್ಪತ್ರೆಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವೀಡಿಯೋ ತೆಗೆದ ಭೂಪ: ಬಂಧನ

- Advertisement -


Renault

Renault
Renault

- Advertisement -

ಉಳ್ಳಾಲ: ಆಸ್ಪತ್ರೆಯ ಖಾಸಗಿ ಕೊಠಡಿಯಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಮೊಬೈಲ್‌ ಮೂಲಕ ವೀಡಿಯೋ ನಡೆಸಿದ್ದ ಆರೋಪಿಯನ್ನು ಉಳ್ಳಾಲದ ಪೊಲೀಸರ ತಂಡ ಶುಕ್ರವಾರ ಬಂಧಿಸಿದೆ.

ಮದನಿನಗರ ನಿವಾಸಿ ಅಬ್ದುಲ್‌ ಮುನೀರ್‌ (40) ಬಂಧಿತ. ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್‌ ತನ್ನ ಮೊಬೈಲ್‌ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಮುನೀರ್‌ ಪರಾರಿಯಾಗಿದ್ದ. ಈ ಕುರಿತು ಮಹಿಳೆ ಜ. 20ರಂದು ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಸಿಸಿ ಕೆಮರಾ ನೆರವು :

ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಆಸ್ಪತ್ರೆಯ ಸಿಸಿ ಟಿವಿ ಕೆಮರಾದಲ್ಲಿ ದೃಶ್ಯಾವಳಿಗ‌ಳನ್ನು ಪರಿಶೀಲಿಸಿದಾಗ ಮುನೀರ್‌ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿತ್ತು.

ಆದರೆ ಆರೋಪಿ ತಲೆಮರೆಸಿಕೊಂಡಿದ್ದು, ಶುಕ್ರವಾರ ಪೊಲೀಸರು ಆತನನ್ನು ಮನೆ ಸಮೀಪ ಬಂಧಿಸಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣಾಧಿಕಾರಿ ಸಂದೀಪ್‌ ಜಿ.ಎಸ್‌ ಹಾಗೂ ಎಸ್‌ಐ ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್‌ಐ ರೇವಣ್ಣ ಸಿದ್ಧಯ್ಯ ಹಾಗೂ ಸಿಬಂದಿ ಪ್ರಶಾಂತ್‌ ಮತ್ತು ಅಕºರ್‌ ಜತೆಗಿದ್ದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments