Monday, October 2, 2023
Homeಕರಾವಳಿಮಂಚಿ ಕೈಯ್ಯೂರ್ ಸುನ್ನೀ ಮಅಲ್‌ನಲ್ಲಿ ಅಜ್ಮೀರ್ ಆಂಡ್ ನೇರ್ಚೆ

ಮಂಚಿ ಕೈಯ್ಯೂರ್ ಸುನ್ನೀ ಮಅಲ್‌ನಲ್ಲಿ ಅಜ್ಮೀರ್ ಆಂಡ್ ನೇರ್ಚೆ

- Advertisement -



Renault

Renault
Renault

- Advertisement -

ಬಂಟ್ವಾಳ: ಸುನ್ನೀ ಮಹಲ್ ಮಂಚಿ ಕೈಯ್ಯೂರಿನಲ್ಲಿ 8ನೇ ಅಜ್ಮೀರ್ ಆಂಡ್ ನೇರ್ಚೆಯು ಸಯ್ಯಿದ್ ಮಶ್ಹೂರ್ ಮುಲ್ಲಕ್ಕೋಯ ತಂಙಳ್ ವಾವಾಡ್ ಕೇರಳ ರವರ ನೇತೃತ್ವದಲ್ಲಿ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ಸುನ್ನೀ ಮಹಲ್ ಸಾರಥಿ ಎಣ್ಮೂರು ಉಸ್ತಾದ್ ರವರ ನೇತೃತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಮಗ್ರಿಬ್ ನಮಾಝಿನ ಬಳಿಕ ಅಜ್ಮೀರ್ ಮೌಲಿದ್ ಪಾರಾಯಣವು ಮಂಚಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ವಾಲೆಮಂಡೋವು ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಯ್ಯಿದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್, ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ, ಮಹಮ್ಮದಲಿ ಸಖಾಫಿ ಅಶ್ ಅರಿಯ್ಯ, ಬೊಳ್ಮಾರು ಉಸ್ತಾದ್, ಸಾಲಿಂ ಸಅದಿ, ಟಿ.ಕೆ. ಸಅದಿ, ರಝ್ಝಾಕ್ ಸಖಾಫಿ, ಸ್ವಾಗತ ಸಮಿತಿ ಚೆಯರ್ಮ್ಯಾನ್ ಅಬೂಬಕ್ಕರ್ ಸೆರ್ಕಳ, ಹಾಗೂ ಸಂಘಟನಾ ನಾಯಕರು, ಧಾರ್ಮಿಕ ನಾಯಕರು, ಉಲಮಾ, ಉಮರಾ ನೇತಾರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಬೂಬಕ್ಕರ್ ಲತೀಫೀ ಎಣ್ಮೂರು ರವರು ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments