Friday, December 2, 2022
Homeಅಂತರಾಷ್ಟ್ರೀಯಮಂಗಳೂರು ವಿಮಾನ ನಿಲ್ದಾಣ: 55.39 ಲ.ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ..!!

ಮಂಗಳೂರು ವಿಮಾನ ನಿಲ್ದಾಣ: 55.39 ಲ.ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟ ಪತ್ತೆ..!!

- Advertisement -
Renault

Renault

Renault

- Advertisement -

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳು ಸೋಮವಾರ ಮತ್ತು ಮಂಗಳವಾರ ಎರಡು ಪ್ರಕರಣಗಳಲ್ಲಿ ಒಟ್ಟು 55.39 ಲ.ರೂ. ಮೌಲ್ಯದ ಚಿನ್ನ ಅಕ್ರಮ ಸಾಗಾಟವನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ದುಬಾೖನಿಂದ ಬಂದಿದ್ದ ಮೂವರು ಚಪ್ಪಲಿ ಮತ್ತು ಬನಿಯಾನ್‌ನಲ್ಲಿ ಪೇಸ್ಟ್‌ ರೂಪದಲ್ಲಿ 24 ಕ್ಯಾರೆಟ್‌ ಪರಿಶುದ್ಧತೆಯ 897 ಗ್ರಾಂ ತೂಕದ 45,65,730 ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದರು.

ಮತ್ತೊಂದು ಪ್ರಕರಣದಲ್ಲಿ ಮಂಗಳವಾರ ದುಬಾೖನಿಂದ ಬಂದಿದ್ದ ಕಾಸರಗೋಡಿನ ವ್ಯಕ್ತಿ 9.74 ಲ.ರೂ ಮೌಲ್ಯದ 190.250 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸಲು ಯತ್ನಿಸುತ್ತಿದ್ದ ಎಂದು ಕಸ್ಟಮ್ಸ್‌ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments