ಮಂಗಳೂರು: ಪಚ್ಚನಾಡಿಯ ಕಾರ್ಮಿಕ ಕಾಲೊನಿಯ ಸುಮಾರು ಎರಡು ಎಕರೆ ಸರ್ಕಾರಿ ಜಾಗವನ್ನು ಸ್ಥಳೀಯ ಕಾರ್ಪೊರೇಟರ್ ಮತ್ತು ಅವರ ಪತಿ ಅಕ್ರಮವಾಗಿ ಹಂಚಿಕೆ ಮಾಡಿಕೊಡುತ್ತಿದ್ದು, ಇದರ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್ ಬಾವ ಆಗ್ರಹಿಸಿದರು.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಜಾಗವನ್ನು ಸ್ಥಳೀಯರು ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬಳಸುತ್ತಿದ್ದರು. ಇಲ್ಲಿ ಕೆಲವು ದಿನಗಳ ಹಿಂದೆ ಕೆಂಪು ಕಲ್ಲು, ಮರಳನ್ನು ಶೇಖರಿಸಿದ್ದು, ಅಕ್ರಮವಾಗಿ ಮನೆ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಹಿಂದೆಯೂ ಮನೆ ನಿರ್ಮಾಣ, ಮರಗಳ ಕಡಿದು ಸಾಗಣೆ ನಡೆದಿದೆ. ಇದು ಸರ್ಕಾರಿ ಭೂ ಕಬಳಿಕೆಯ ಹುನ್ನಾರವಾಗಿದೆ’ ಎಂದರು.
ವಿಷಯ ತಿಳಿದು ಬುಧವಾರ ಸ್ಥಳದಲ್ಲಿ ಸೇರಿದ್ದ ಸಾರ್ವಜನಿಕರಿಗೆ ಬೆದರಿಕೆ ಹಾಕಲಾಗಿದೆ. ಇದು ಕುಮ್ಕಿ ಜಾಗ ಎಂದು ಸ್ಥಳೀಯ ಕಾರ್ಪೊರೇಟರ್ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕುಮ್ಕಿ ಜಾಗ ಆಗಿದ್ದರೂ, ಸರ್ಕಾರದ ಅನುಮತಿ ಇಲ್ಲದೆ ಯಾರೊಬ್ಬರಿಗೂ ಹಂಚಿಕೆ ಮಾಡಲು ಸಾಧ್ಯವಿಲ್ಲ ಎಂದರು.
ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ವಾರ್ಡ್ ಸಮಿತಿ ಅಧ್ಯಕ್ಷ ಸ್ಟೀವನ್ ಪಚ್ಚನಾಡಿ, ಪ್ರಮುಖರಾದ ಮಲ್ಲಿಕಾರ್ಜುನ, ರವಿ ಭಟ್, ವಿಕ್ಟರ್ ಪಚ್ಚನಾಡಿ, ಫಯಾಝ್ ಅಮ್ಮೆಮಾರ್ ಇದ್ದರು.
ಯಾರೂ ಕೂಡ ಕಾನೂನನ್ನು ಉಲ್ಲಂಘನೆ ಮಾಡುವುದು ಸರಿಯಲ್ಲ. …ಸದರಿ ಜಾಗ ಕಾನೂನಿನ ಪ್ರಕಾರವೇ ಸಕಾರಾತ್ಮಕವಾಗಿ ಸಾರ್ವಜನಿಕರಿಗೆ ಉಪಯೋಗವಾಗಲಿ