Wednesday, February 8, 2023
Homeಕರಾವಳಿಪ್ರೇಮಿಗಳ ದಿನದಂದು ಅಹಿತಕರ ಘಟನೆ ನಡೆಯದಂತೆ ಕ್ರಮ: ಮಂಗಳೂರು ಡಿಸಿಪಿ

ಪ್ರೇಮಿಗಳ ದಿನದಂದು ಅಹಿತಕರ ಘಟನೆ ನಡೆಯದಂತೆ ಕ್ರಮ: ಮಂಗಳೂರು ಡಿಸಿಪಿ

- Advertisement -

Renault

Renault
Renault

- Advertisement -

ಮಂಗಳೂರು: ಪ್ರೇಮಿಗಳ ದಿನಾಚರಣೆಯ ದಿನದಂದು ( ಫೆ.14) ಯಾವುದೇ ಅಹಿತಕರ ಘಟನೆಗೆ ಆಸ್ಪದವಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

ವ್ಯಾಲಂಟೈನ್ಸ್ ಡೇ ಆಚರಣೆಗೆ ವಿರೋಧ ವ್ಯಕ್ತಪಡಿಸುವ ಕುರಿತಾದ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತಿರುವ ಹಿನ್ನಲೆಯಲ್ಲಿ ಡಿಸಿಪಿ ಹೇಳಿಕೆ ನೀಡಿದ್ದಾರೆ.

ಪ್ರೇಮಿಗಳ ದಿನಾಚರಣೆ ಮಾಡಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಓರ್ವನನ್ನು ಠಾಣೆಗೆ ಕರೆಸಿ ಮುಚ್ಚಳಿಕೆ ಬರೆಯಿಸಿ ಎಚ್ಚರಿಕೆ ನೀಡಿಲಾಗಿದೆ. ಇತರ ಹಲವರನ್ನು ಠಾಣೆಗೆ ಕರೆಸಿ ಸಭೆ ನಡೆಸಿ ಎಚ್ಚರಿಕೆ ನೀಡಲಾಗಿದೆ ಎಂದರು.

ಫೆ.14ರಂದು ಸೂಕ್ತ ಭದ್ರತಾ ಕ್ರಮ ಕೈಗೊಳ್ಳುತ್ತೇವೆ. ರಾಣಿ ಅಬ್ಬಕ್ಕ ಪಡೆಯು ನಿರಂತರ ಗಸ್ತಿನಲ್ಲಿರುತ್ತದೆ ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments