Tuesday, September 28, 2021
HomeರಾಜಕೀಯVIDEO: ಬೀದಿಪಾಲಾಗಿರುವ ಗೋವುಗಳಿಗೆ ಗೋಶಾಲೆಯ ವ್ಯವಸ್ಥೆ...!!! ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ...!!!

VIDEO: ಬೀದಿಪಾಲಾಗಿರುವ ಗೋವುಗಳಿಗೆ ಗೋಶಾಲೆಯ ವ್ಯವಸ್ಥೆ…!!! ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ…!!!

- Advertisement -
Renault
- Advertisement -
Home Plus
- Advertisement -

ಬೀದಿಪಾಲಾಗಿರುವ ಗೋವುಗಳಿಗೆ ಗೋಶಾಲೆಯ ವ್ಯವಸ್ಥೆ…!!!

ಮಾಜಿ ಶಾಸಕ ಮೊಯಿದ್ದೀನ್ ಬಾವ ಭರವಸೆ…!!!

ಮಂಗಳೂರು: ಸರಕಾರಿ ಜಾಗದಲ್ಲಿದೆ ಎಂದು ಆರೋಪಿಸಿ ಧ್ವಂಸಗೊಳಿಸಿರುವ ಕಪಿಲಾ ಗೋ ಶಾಲೆಗೆ ಇಂದು ಭೇಟಿ ನೀಡಿ ನೀಡಿರುವ ಮಾಜಿ ಶಾಸಕ ಮೊಯ್ದೀನ್ ಬಾವಾ ಅವರು ಬೀದಿಪಾಲಾಗಿರುವ ಗೋವುಗಳಿಗೆ ಗೋಶಾಲೆಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ.

ಗೋಶಾಲೆ ಧ್ವಂಸವಾಗಿ ಗೋವುಗಳು ಬೀದಿಪಾಲಾಗಲು ದ.ಕ. ಜಿಲ್ಲೆಯ ಸಂಸದರು ಹಾಗೂ ಶಾಸಕರೇ ಕಾರಣ‌. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರಕಾರದಿಂದ ಒತ್ತಡ ತಂದು ಈ ಕೆಲಸ ಮಾಡಲಾಗಿದೆ ಎಂದು ಕಿಡಿಕಾರಿದರು.

ಬಿಜೆಪಿಗರಿಗೆ ಚುನಾವಣೆಗೋಸ್ಕರ ಮಾತ್ರ ಗೋವುಗಳು ಬೇಕೇ ವಿನಹ, ಗೋವಿನ ಹೆಸರು ಹೇಳಿ ಅಧಿಕಾರಕ್ಕೆ ಬಂದವರೇ ಈಗ ಅವುಗಳನ್ನೇ ಬೀದಿಪಾಲು ಮಾಡಿದ್ದಾರೆ‌. ಶಾಸಕರು, ಸಂಸದರು ಮನಸ್ಸು ಮಾಡಿದ್ದರೆ ಗೋಶಾಲೆಯನ್ನು ಉಳಿಸಬಹುದಿತ್ತು.

ಆದ್ದರಿಂದ ನಾನು ಮುಂದಾಳತ್ವ ವಹಿಸಿಕೊಂಡು ಎಲ್ಲರೂ ಒಗ್ಗಟ್ಟಾಗಿ ಇಲ್ಲಿನ ಗೋವುಗಳಿಗೆ ಉತ್ತಮ ವ್ಯವಸ್ಥೆ ಆಗುವ ರೀತಿಯಲ್ಲಿ ಕೆಲಸ ಮಾಡುತ್ತೇವೆ. ಇನ್ನಾದರೂ ಸರಕಾರ ಈ ಬಗ್ಗೆ ಎಚ್ಚೆತ್ತುಕೊಳ್ಳಲಿ ಎಂದು ಮೊಯ್ದೀನ್ ಬಾವ ಹೇಳಿದ್ದಾರೆ.

- Advertisement -

LEAVE A REPLY

Please enter your comment!
Please enter your name here

- Advertisment -

Most Popular

Recent Comments