Sunday, May 28, 2023
HomeUncategorizedಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ!!ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯ

ಸ್ಥಳೀಯರಿಗೆ ಉದ್ಯೋಗದಲ್ಲಿ ಪ್ರಾಶಸ್ತ್ಯ!!ಸರೋಜಿನಿ ಮಹಿಷಿ ವರದಿ ಸಮರ್ಪಕವಾಗಿ ಜಾರಿಗೆ ಶಾಸಕ ಡಾ.ಭರತ್ ಶೆಟ್ಟಿ ಒತ್ತಾಯ

- Advertisement -


Renault

Renault
Renault

- Advertisement -

ಬೆಂಗಳೂರು: ಸ್ಥಳೀಯವಾಗಿ ಇರುವ ಕೈಗಾರಿಕೆ, ಕಂಪನಿಗಳಲ್ಲಿ ಸ್ಥಳೀಯ ಕನ್ನಡಿಗರಿಗೆ ಶೇಕಡಾವಾರು ಉದ್ಯೋಗ ಕಡ್ಡಾಯವಾಗಿ ನೀಡುವಂತಾಗಲು ಸರೋಜಿನಿ ಮಹಿಷಿ ವರದಿಯನ್ನು ಸಮರ್ಪವಾಗಿ ಅನುಷ್ಟಾನಗೊಳಿಸಲು ಸರಕಾರ ಮುಂದಾಗಬೇಕು ಎಂದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ.ಭರತ್ ಶೆಟ್ಟಿ ವೈ ಸದನದಲ್ಲಿ ಒತ್ತಾಯಿಸಿದರು.


50ಕ್ಕಿಂತ ಅಧಿಕ ಉದ್ಯೋಗಿಗಳು ಇದ್ದಲ್ಲಿ ಈ ನಿಯಮ ಜಾರಿಯಾಗಬೇಕಿದೆ.
ಸಿ ಮತ್ತು ಡಿ ಗ್ರೂಪ್ ಗಳಲ್ಲಿ ಶೇ 100, ಬಿ ಗ್ರೂಪ್ ಗೆ ಶೇ 85, ಎ ಗ್ರೂಪ್ ಗೆ ಶೇ 65, ಉದ್ಯೋಗವನ್ನು ನೀಡಬೇಕೆಂಬ ನಿಯಮವಿದೆ.

ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಸಭೆ ನಡೆದು ವರದಿ ಅನುಷ್ಟಾನ ಮಾಡಲು ಅವಕಾಶ ನೀಡಲಾಗಿದೆ. ಕೈಗಾರಿಕಾ ಉದ್ಯೋಗ ನೀತಿಯಲ್ಲಿ ಇದರ ಬಗ್ಗೆ 2019ರಲ್ಲಿ ತಿದ್ದು ಪಡಿ ಮಾಡಲಾಗಿದೆ.


ಆದರೆ ಇದನ್ನು ಕಟ್ಟು ನಿಟ್ಟಾಗಿ ಜಾರಿ ಮಾಡಿ ಸ್ಥಳೀಯರಿಗೆ ಉದ್ಯೋಗ ಸಿಗುವಂತೆ ಸರಕಾರ ಮಾಡಬೇಕಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಒತ್ತಾಯಿಸಿದರು.

ಇದಕ್ಕೆ ಸದನದಲ್ಲಿ ಉತ್ತರಿಸಿದ ಕಾರ್ಮಿಕ ಸಚಿವ ಹೆಬ್ಬಾರ್ ಈ ಬಗ್ಗೆ ಗಮನಹರಿಸಲಾಗುವುದು ಎಂದು ಭರವಸೆ ನೀಡಿದರು.

- Advertisement -

LEAVE A REPLY

Please enter your comment!
Please enter your name here

Most Popular

Recent Comments