Tuesday, September 27, 2022
HomeUncategorizedಅಮೆರಿಕವನ್ನು ಗುಣಪಡಿಸುವ ಸಮಯ: ಅಧ್ಯಕ್ಷರಾಗಿ ಜೋ ಬಿಡೆನ್ ಮೊದಲ ಭಾಷಣ!

ಅಮೆರಿಕವನ್ನು ಗುಣಪಡಿಸುವ ಸಮಯ: ಅಧ್ಯಕ್ಷರಾಗಿ ಜೋ ಬಿಡೆನ್ ಮೊದಲ ಭಾಷಣ!

- Advertisement -
Renault

Renault

Renault

Renault


- Advertisement -

ಅಮೆರಿಕದ 46ನೇ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡೆಮಾಕ್ರೆಟಿಕ್ ಪಕ್ಷದ ಜೋ ಬಿಡೆನ್, ದೇಶವನ್ನುದ್ದೇಶಿಸಿ ತಮ್ಮ ಮೊದಲ ಭಾಷಣ ಮಾಡಿದ್ದಾರೆ. ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ಕಮಲಾ ಹ್ಯಾರಿಸ್ ಕೂಡ ದೇಶವನ್ನು ಉದ್ದೇಶಿಸಿ ತಮ್ಮ ಮೊದಲ ಭಾಷಣ ಮಾಡಿದರು.

ರಾಜಧಾನಿ ವಾಷಿಂಗ್ಟನ್ ಡಿಸಿಯಲ್ಲಿ ನಡೆಯುತ್ತಿರುವ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಜೋ ಬಿಡೆನ್, ಇದು ‘ಅಮೆರಿಕವನ್ನು ಗುಣಪಡಿಸುವ ಸಮಯ’ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಚುನಾವಣಾ ಫಲಿತಾಂಶ ಘೋಷಣೆಯಾಗಿದೆ. ಅಮೆರಿಕನ್ನರು ತಮ್ಮ ಪವಿತ್ರ ಮತಗಳ ಮೂಲಕ ನನ್ನನ್ನು ಈ ಮಹಾನ್ ರಾಷ್ಟ್ರದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಇದೀಗ ದ್ವೇಷವನ್ನು ಮರೆತು ಎಲ್ಲರೂ ಒಗ್ಗೂಡಿ ಅಮೆರಿಕವನ್ನು ಸಮಯ ಬಂದಿದೆ ಎಂದು ಜೋ ಬಿಡೆನ್ ಕರೆ ನೀಡಿದ್ದಾರೆ.

ಇದೇ ವೇಳೆ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಜೋ ಬಿಡೆನ್, ನಿಮ್ಮ ನಿರಾಶೆ ನನಗೆ ಅರ್ಥವಾಗುತ್ತದೆ. ಆದರೆ ಅಮೆರಿಕವನ್ನು ಮತ್ತೆ ಜಾಗತಿಕ ಭೂಪಟದಲ್ಲಿ ಮಹಾನ್ ರಾಷ್ಟ್ರವನ್ನಾಗಿ ಮಾಡಲು ನನಗೆ ನಿಮ್ಮೆಲ್ಲರ ಸಹಕಾರದ ಅವಶ್ಯಕತೆಯಿದೆ ಎಂದು ಭಾವನಾತ್ಮಕವಾಗಿ ನುಡಿದರು.

ಚುನಾವಣಾ ಸಂದರ್ಭದ ಕಹಿಯನ್ನು ಮರೆತು ನಾವು ಒಂದಾಗಿ ದುಡಿಯೋಣ. ಅಮೆರಿಕವನ್ನು ಮತ್ತೆ ಮಹಾನ್ ರಾಷ್ಟ್ರವನ್ನಾಗಿ ಮಾಡೋಣ ಎಂದು ಜೋ ಬಿಡೆನ್ ಅಮೆರಿಕನ್ನರಲ್ಲಿ ಮನವಿ ಮಾಡಿದರು.

ಪ್ರಜಾಪ್ರಭುತ್ವ ರಕ್ಷಣೆಗಾಗಿ ಹೋರಾಟ:
ಇದೇ ವೇಳೆ ಮಾತನಾಡಿದ ಅಮೆರಿಕದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಕಮಲಾ ಹ್ಯಾರಿಸ್, ಈ ಮಹಾನ್ ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಲು ನಮ್ಮ ಹೋರಾಟ ಮುಂದುವರೆಯುವುದು ಎಂದು ಸ್ಪಷ್ಟಪಡಿಸಿದರು.

ಸುಂದರ ಭವಿಷ್ಯವನ್ನು ನಿರ್ಮಿಸಲು ನಮಗೆ ಅವಕಾಶ ಒದಗಿಬಂದಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಈ ಅವಕಾಶವನ್ನು ಬಳಿಸಿಕೊಳ್ಳೋಣ ಎಂದು ಕಮಲಾ ಹ್ಯಾರಿಸ್ ಕರೆ ನೀಡಿದರು.

ಭಾರತದ ತಮಿಳುನಾಡಿನಿಂದ ನನ್ನ ತಾಯಿ ಶ್ಯಾಮಲಾ ಗೋಪಾಲನ್ ಕೇವಲ 19 ವರ್ಷದ ಪ್ರಾಯದಲ್ಲಿ ಅಮೆರಿಕಕ್ಕೆ ಕಾಲಿಟ್ಟಿದ್ದರು. ಆದರೆ ಒಂದು ದಿನ ತಮ್ಮ ಮಗಳು ಈ ಮಹಾನ್ ದೇಶದ ಉಪಾಧ್ಯಕ್ಷಳಾಗಿ ಆಯ್ಕೆಯಾಗಲಿದ್ದಾಳೆ ಎಂದು ಅವರರು ಎಣಿಸಿರಲಿಲ್ಲ. ಆದರೆ ಅಮೆರಿಕದ ಪ್ರಜಾಪ್ರಭುತ್ವದ ಮೇಲೆ ಅವರಿಗಿದ್ದ ಅಪಾರ ನಂಬಿಕೆಯೇ ನನ್ನನ್ನು ಇಲ್ಲಿಯವರೆಗೆ ಕರೆದು ತಂದಿದೆ ಎಂದು ಕಮಲಾ ಹ್ಯಾರಿಸ್ ಭಾವನಾತ್ಮಕವಾಗಿ ನುಡಿದರು.

ಇನ್ನು ಜೋ ಬಿಡೆನ್ ಅವರೊಂದಿಗೆ ಕೆಲಸ ಮಾಡಲು ತಾವು ಉತ್ಸುಕರಾಗಿರುವುದಾಗಿ ಹೇಳಿದ ಕಮಲಾ ಹ್ಯಾರಿಸ್, ಅಮೆರಿಕದ ಸೇವೆಯ ಈ ಹಾದಿಯಲ್ಲಿ ಅವರ ಮಾರ್ಗದರ್ಶನ ದೊರೆಯುತ್ತಿರುವುದು ನನ್ನ ಭಾಗ್ಯ ಎಂದು ಹೇಳಿದರು.

- Advertisement -


LEAVE A REPLY

Please enter your comment!
Please enter your name here

- Advertisment -

Most Popular

Recent Comments