Tuesday, June 6, 2023
HomeUncategorizedವೈಜ್ಞಾನಿಕ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿ: ಶಾಸಕ ಖಾದರ್

ವೈಜ್ಞಾನಿಕ ಆಧಾರದಲ್ಲಿ ಸರ್ಕಾರ ತೀರ್ಮಾನ ಕೈಗೊಳ್ಳಲಿ: ಶಾಸಕ ಖಾದರ್

- Advertisement -


Renault

Renault
Renault

- Advertisement -

ಎರಡನೆಯ ಹಂತದ ಕೋವಿಡ್ ಎದುರಿಸಲು ರಾಜ್ಯ ಸರ್ಕಾರ ಯಾವ ಸಿದ್ಧತೆ ನಡೆಸಿದೆ ಮತ್ತು ಜನರಿಗೆ ಯಾವ ರೀತಿಯಲ್ಲಿ ಜಾಗೃತಿ ನೀಡಲಿದೆ ಎಂಬ ಕುರಿತು ಸರ್ಕಾರದ ವೈಜ್ಞಾನಿಕ ಸಮಿತಿ ನೀಡಿರುವ ವರದಿಯನ್ನು ಜನತೆಗೆ ತಿಳಿಸಬೇಕು. ವೈಜ್ಞಾನಿಕ ಆಧಾರದಲ್ಲಿಯೇ ತೀರ್ಮಾನ ಕೈಗೊಳ್ಳಬೇಕು. ಗೊಂದಲಕ್ಕೆ ಅವಕಾಶ ಕಲ್ಪಿಸಬಾರದು ಎಂದು ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಟ್ ಕರ್ಫ್ಯೂ ಹೇಳಿಕೆಯಿಂದ ಈಗಾಗಲೇ ಜನತೆಯಲ್ಲಿ ಗೊಂದಲ ಸೃಷ್ಟಿಯಾಗಿದೆ. ಸರ್ಕಾರ ಜನರ ಆರೋಗ್ಯದ ಬಗ್ಗೆ ಕೈಗೊಳ್ಳುವ ತೀರ್ಮಾನ ವೈಜ್ಞಾನಿಕ ಆಧಾರದಲ್ಲಿರಬೇಕೇ ಹೊರತು ರಾಜಕೀಯವಾಗಿರಬಾರದು ಎಂದರು.
ಪ್ರಸ್ತುತ ಆಯುಷ್ಮಾನ್ ಯೋಜನೆಯಡಿ ಐಸಿಯುಗೆ ದಾಖಲಾದ ಕೋವಿಡ್ ರೋಗಿಗಳಿಗೆ ಮಾತ್ರವೇ ಸೌಲಭ್ಯ ದೊರೆಯುತ್ತಿದೆ. ಎರಡನೆಯ ಹಂತದ ಕೋವಿಡ್ ವ್ಯಾಪಕವಾದಲ್ಲಿ ಆಯುಷ್ಮಾನ್‌ನಡಿ ಚಿಕಿತ್ಸೆ ದೊರೆಯದೆ ಜನಸಾಮಾನ್ಯರು ತೊಂದರೆಗೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಹಿಂದಿನಂತೆಯೇ ಕೋವಿಡ್ ರೋಗಿಗಳಿಗೆ ಆಯುಷ್ಮಾನ್‌ನಡಿ ಚಿಕಿತ್ಸೆ ದೊರೆಯುವಂತಹ ಆದೇಶವನ್ನು ಸರ್ಕಾರ ಹೊರಡಿಸಬೇಕು ಎಂದು ಖಾದರ್ ಒತ್ತಾಯಿಸಿದರು

- Advertisement -

LEAVE A REPLY

Please enter your comment!
Please enter your name here

Most Popular

Recent Comments