Saturday, June 3, 2023
Homeರಾಜಕೀಯತಿರುವುನಂತಪುರಂ ಕಾರ್ಪೋರೇಷನ್‌ನ ಮೇಯರ್‌ ಆಗಿ 21 ವರ್ಷ ಪ್ರಾಯದ ಬಿಎಸ್ಸಿ ವಿದ್ಯಾರ್ಥಿನಿ ಆಯ್ಕೆ

ತಿರುವುನಂತಪುರಂ ಕಾರ್ಪೋರೇಷನ್‌ನ ಮೇಯರ್‌ ಆಗಿ 21 ವರ್ಷ ಪ್ರಾಯದ ಬಿಎಸ್ಸಿ ವಿದ್ಯಾರ್ಥಿನಿ ಆಯ್ಕೆ

- Advertisement -


Renault

Renault
Renault

- Advertisement -

ತಿರುವನಂತಪುರಂ: ಇತ್ತೀಚೆಗೆ ಕೇರಳದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವುಕಂಡಿದ್ದ ಎಲ್‌ಡಿಎಫ್‌ನ ಆರ್ಯ ರಾಜೇಂದ್ರನ್‌ ಅವರು ತಿರುವುನಂತಪುರಂ ಕಾರ್ಪೋರೇಷನ್‌ನ ಮೇಯರ್‌ ಆಗುವ ಮೂಲಕ ಭಾರತದ ಅತೀ ಕಿರಿಯ ಮೇಯರ್‌ ಎಂಬ ಗರಿಮೆಗೆ ಪಾತ್ರರಾಗಿದ್ದಾರೆ.

21 ವರ್ಷ ಪ್ರಾಯದ ಆರ್ಯ ರಾಜೇಂದ್ರನ್‌ ಅವರು ಮುದುವನ್ಮುಗಲ್‌ ಕ್ಷೇತ್ರದ ವಾರ್ಡ್‌ ಕೌನ್ಸಿಲರ್‌ ಆಗಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಗೆಲುವು ಕಂಡಿದ್ದರು. ಇದೀಗ ತಮ್ಮ ಮೊದಲ ಗೆಲುವಿನಲ್ಲೇ ಮೇಯರ್‌ ಆಗುವ ಅವಕಾಶ ಆರ್ಯ ಅವರಿಗೆ ಲಭಿಸಿದ್ದು, ಆರ್ಯ ರಾಜೇಂದ್ರನ್ ಅವರನ್ನು ಮೇಯರ್‌ ಆಗಿ ಆಯ್ಕೆ ಮಾಡುವುದಾಗಿ ಸಿಪಿಎಂ ಜಿಲ್ಲಾ ಕಾರ್ಯಾಲಯ ತಿಳಿಸಿದೆ.

ಚುನಾವಣೆ ಸಂದರ್ಭದಲ್ಲಿ ಜಮೀಲಾ ಶ್ರೀಧರ್‌ ಅವರನ್ನು ಮೇಯರ್‌ ಅಭ್ಯರ್ಥಿಯನ್ನಾಗಿ ಸೂಚಿಸಲಾಗಿತ್ತು. ಆದರೆ ಇದೀಗ ಮೇಯರ್‌ ಪಟ್ಟ 21 ವರ್ಷದ ಆರ್ಯ ರಾಜೇಂದ್ರನ್ ಅವರಿಗೆ ಒಲಿದಿದೆ. ವಿಶೇಷ ಅಂದ್ರೆ ಆರ್ಯ ರಾಜೇಂದ್ರನ್‌ ಅವರನ್ನು ಮೇಯರ್‌ ಆಗಿ ಒಮ್ಮತದಿಂದ ಆಯ್ಕೆ ಮಾಡಲಾಗಿದ್ದು, ಆ ಮೂಲಕ ದೇಶದ ಕಿರಿಯ ಮೇಯರ್‌ ಎಂಬ ಹೆಗ್ಗಳಿಕೆಗೆ ಆರ್ಯ ಪಾತ್ರರಾಗಿದ್ದಾರೆ.

ಆಲ್‌ ಸೇಂಟ್ಸ್‌ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿನಿಯಾಗಿರುವ ಆರ್ಯ ರಾಜೇಂದ್ರನ್‌ ಎಸ್‌ಎಫ್‌ಐ ರಾಜ್ಯ ಸಮಿತಿಯ ಸದಸ್ಯರಾಗಿದ್ದಾರೆ. ಅಲ್ಲದೇ ಬಾಲಜನಸಂಗಂ ಘಟಕದ ರಾಜ್ಯಾಧ್ಯಕ್ಷರಾಗಿದ್ದಾರೆ.

- Advertisement -

LEAVE A REPLY

Please enter your comment!
Please enter your name here

Most Popular

Recent Comments