ರನ್ನರ್ಸ್ ಆಗಿ ಹೊರ ಹೊರಹೊಮ್ಮಿದ ಪ್ರೆಸ್ ಇಲೆವೆನ್…!!!
ಪುತ್ತೂರು: ವಿವಿಧ ಇಲಾಖೆಗಳನ್ನ ಒಗ್ಗೂಡಿಸಿಕೊಂಡು ‘ಭಾಂದವ್ಯ’ ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್ ನಗರದ ವಿವೇಕಾನಂದ ಕಾಲೇಜಿನಲ್ಲಿ ನಡೆಯಿತು. ವಿವಿಧ ಇಲಾಖೆಗಳ ಸುಮಾರು 16 ತಂಡಗಳು ಟೂರ್ನಿಯಲ್ಲಿ ಪಾಲ್ಗೊಂಡು ತಮ್ಮ ಬಲ ಪ್ರದರ್ಶನಗೈದರು. ಈ ಪಂದ್ಯಾ ಕೂಟದ ಮೊದಲ ಸೆಮಿಫೈನಲ್ ಪಂದ್ಯ ಭಾರೀ ರಣರೋಚಕದಿಂದ ಕೂಡಿತ್ತು. ಮೆಸ್ಕಾಂ ಹಾಗೂ ಪ್ರೆಸ್ ಇಲೆವೆನ್ ನಡುವಿನ ಜಿದ್ದಾ ಜಿದ್ದಿನ ಪಂದ್ಯ ನೆರೆದಿದ್ದ ಕ್ರೀಡಾ ಪ್ರೇಮಿಗಳನ್ನು ಪಂದ್ಯಾಟದ ಕೊನೇ ಎಸೆತದ ವರೆಗೂ ತುದಿಗಾಳಿಲ್ಲಿ ನಿಲ್ಲುವಂತೆ ಮಾಡಿತ್ತು. 4 ಓವರ್ ಗಳ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಸ್ಕಾಂ, ಪ್ರೆಸ್ ಇಲೆವೆನ್ ಗೆ 34 ರನ್ ಗಳ ಕಠಿಣ ಟಾರ್ಗೆಟ್ ನ್ನ ನೀಡಿತು. ಇದನ್ನ ಬೆನ್ನಟ್ಟಿದ ಪ್ರೆಸ್ ಇಲೆವೆನ್ ಆರಂಭದಲ್ಲೇ ಪೆವಿಲಿಯನ್ ಪರೇಡ್ ಮಾಡಿ ಸೋಲಿನ ದವಡೆಗೆ ಸಿಲುಕಿತ್ತು. ಆದ್ರೆ ಆರಂಭಿಕ ಆಟಗಾರ ವೀಕ್ಷಿತ್ ಒಂದು ಕಡೆ ಭದ್ರವಾಗಿಯೇ ಉಳಿದಿದ್ರು. ಕೊನೆಯೇ ಎರಡು ಓವರ್ ಗಳಲ್ಲಿ ಮಾತ್ರ ನಡೆದಿದ್ದು ಎಲ್ಲವೂ ಮ್ಯಾಜಿಕ್. ವೀಕ್ಷಿತ್ ಅಬ್ಬರದ ಬ್ಯಾಟಿಂಗ್ ಗೆ ತಬ್ಬಿಬ್ಬಾದ ಮೆಸ್ಕಾಂ ಇಲೆವೆನ್ ಕೊನೇ ಓವರ್ ನ ಒಂದು ಎಸೆತದಲ್ಲಿ ಸೋಲೊಪ್ಪಿಕೊಂಡಿತು. ಈ ಮೂಲಕ ಪ್ರೆಸ್ ಫೈನಲ್ ಪ್ರವೇಶಿಸಿತು. ಇನ್ನೊಂದೆಡೆ ಎರಡನೇ ಸೆಮಿಫೈನಲ್ ನಲ್ಲಿ ಸುದ್ದಿ ಬಿಡುಗಡೆ ತಂಡ ಹಾಗೂ ಪೊಲೀಸ್ ಇಲೆವೆನ್ ನಡುವೆ ನಡೆದ ಹೋರಾಟದಲ್ಲಿ ಪೊಲೀಸ್ ಇಲೆವೆನ್ ಸುದ್ದಿಬಿಡುಗಡೆಯ ಬೌಲರ್ ಗಳನ್ನ ಬೆವರಿಲಿಸಿ ಬೆಂಡೆತ್ತಿದ್ರು. ನಾಲ್ಕು ಓವರ್ ಗಳಲ್ಲಿ ಬರೋಬ್ಬರಿ 57 ರನ್ ಚಚ್ಚಿದ ಪೊಲೀಸ್ ಇಲೆವೆನ್ ಬ್ಯಾಟ್ ಮೂಲಕ ರುಚಿ ತೋರಿಸಿದ್ರು. ಇದನ್ನ ಬೆನ್ನತ್ತಿದ ಸುದ್ದಿ ಬಿಡುಗಡೆ ತಂಡ ಮೊದಲ ಓವರ್ ನಿಂದಲೇ ಡಾಟ್ ಮೇಲೆ ಡಾಟ್ ಮಾಡಿ ರನ್ ತೆಗೆಯಲು ಪೇಚಾಡಿದ್ರು. ಈ ಮೂಲಕ ಹೀನಾಯ ಸೋಲನ್ನೊಪ್ಪಿಕೊಂಡ್ರು. ಇದರೊಂದಿಗೆ ಪೊಲೀಸ್ ಇಲೆವೆನ್ ಫೈನಲ್ ಹಂತಕ್ಕೆ ಪ್ರವೇಶಿಸಿತು. ಇನ್ನು ಫೈನಲ್ ನ ಹೋರಾಟದಲ್ಲಿ ಎರಡು ಬಲಾಢ್ಯ ತಂಡಗಳಾದ ಪೊಲೀಸ್ ಇಲೆವೆನ್ ಹಾಗೂ ಪ್ರೆಸ್ ಇಲೆವೆನ್ ನಡುವೆ ಕುತೂಹಲ ಹುಟ್ಟು ಹಾಕಿತು. ಮೈದಾನದ ಸುತ್ತಲೂ ನೆರೆದಿದ್ದ ಜನ ಯಾರ ಪಾಲಿಗೆ ಭಾಂದವ್ಯ ಟ್ರೋಪಿ ಒಲಿಯುತ್ತೆ ಅಂತ ಕಾತರರಾಗಿದ್ರು. ನಾಲ್ಕು ಓವರ್ ಗಳ ಪಂದ್ಯಾಟದಲ್ಲಿ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ಪೊಲೀಸ್ ಇಲೆವೆನ್ ಮೊದಲ ಓವರ್ ನಲ್ಲೇ ರನ್ ಗಾಗಿ ಪೇಚಾಡಿದ್ರು. ಎರಡನೇ ಓವರ್ ನಲ್ಲೂ ರನ್ ಗಾಗಿ ಹೋರಾಟ ಮುಂದುವರಿಸಿದ್ರು. ಆದ್ರೆ ಕೊನೆಯ ಎರಡು ಓವರ್ ನಲ್ಲಿ ರನ್ ಮಳೆ ಸುರಿಸಿದ ಪೊಲೀಸ್ ಇಲೆವೆನ್, ಪ್ರೆಸ್ ಇಲೆವೆನ್ ಗೆ 43 ರನ್ನಿನ ಬೃಹತ್ ಟಾರ್ಗೆಟ್ ನೀಡಿತು. ಇದನ್ನ ಬೆನ್ನಟ್ಟಿದ ಪ್ರೆಸ್ ಇಲೆವೆನ್ ಆರಂಭಿಕ ಆಟಗಾರ ಮೊದಲ ಎಸೆತವನ್ನೇ ಸಿಕ್ಸರ್ ಗೆ ಅಟ್ಟುವ ಮೂಲಕ ತಂಡದ ಆಟಗಾರಿಗೆ ಗೆಲುವಿನ ಸೂಚನೆಯನ್ನ ತೋರಿಸಿದ್ರು. ಆದ್ರೆ ಬಲಿಷ್ಠ ಬೌಲಿಂಗ್ ಲೈನಪ್ ಗಳನ್ನ ಹೊಂದಿದ್ದ ಪೊಲೀಸ್ ಇಲೆವೆನ್ ಪ್ರೆಸ್ ಇಲೆವೆನ್ ತಂಡದ ಆಟಗಾರರನ್ನ ಕಟ್ಟಿ ಹಾಕುವಲ್ಲಿ ಯಶಸ್ವಿಯಾದ್ರು. ಕೊನೆಯೇ ಎರಡು ಬಾಲ್ ನಲ್ಲಿ ಎರಡು ಸಿಕ್ಸರ್ ಅವಶ್ಯಕತೆ ಇತ್ತು. ಒಂದು ಬಾಲ್ ಗೆ ವಿಕೆಟ್ ಪತನವಾದ್ರೆ, ಮತ್ತೊಂದು ಬಾಲ್ ಗೆ ಪ್ರೆಸ್ ಇಲೆವೆನ್ ತಂಡದ ಆಟಗಾರ ಪ್ರಜ್ವಲ್ ಅಮೀನ್ ಸಿಕ್ಸರ್ ಸಿಡಿಸುವ ಮೂಲಕ ಪ್ರೆಸ್ ಇಲೆವೆನ್ ಐದು ರನ್ನಿನ ಸೋಲೊಪ್ಪಿಕೊಂಡಿತು. ಈ ಮೂಲಕ ಭಾಂದವ್ಯ ಟ್ರೋಫಿಗೆ ಪೊಲೀಸ್ ಇಲೆವೆನ್ ಮುತ್ತಿಕ್ಕಿತು. ರನ್ನರ್ಸ್ ಆಗಿ ಪ್ರೆಸ್ ಇಲೆವೆನ್ ತಂಡ ಹೊರಹೊಮ್ಮಿತು. ಇನ್ನು ಭಾಂದವ್ಯ ಟ್ರೋಫಿಯನ್ನ ಸ್ಕರಿಯ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ಪಂದ್ಯಾಟದ ಬೆಸ್ಟ್ ಬ್ಯಾಟ್ಸ್ ಮನ್ ಹಾಗೂ ಬೆಸ್ಟ್ ಬೌಲರ್ ಗಳಾಗಿ ಪ್ರೆಸ್ ಕ್ಲಬ್ ತಂಡ ಸದಸ್ಯರು ಪಡೆದುಕೊಂಡರು. ಈ ಟೂರ್ನಿಯ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪೊಲೀಸ್ ಇಲೆವನ್ ತಂಡದ ಸದಸ್ಯ ಭಾಜನರಾದ್ರು.