Saturday, June 3, 2023
HomeUncategorizedಬೊಲೆರೋ – ಬೈಕ್ ಢಿಕ್ಕಿ : ಇಬ್ಬರ ದುರ್ಮರಣ

ಬೊಲೆರೋ – ಬೈಕ್ ಢಿಕ್ಕಿ : ಇಬ್ಬರ ದುರ್ಮರಣ

- Advertisement -


Renault

Renault
Renault

- Advertisement -

ಹಾವೇರಿ : ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದ ವೇಳೆಯಲ್ಲಿ ಬೊಲೇರೋ ವಾಹನವೊಂದು ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯಯ ಬ್ಯಾಡಗಿ ತಾಲೂಕಿನ ಕದಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾವೇರಿ ಜಿಲ್ಲೆಯ ಗಣಜೂರು ಗ್ರಾಮದ ನಿವಾಸಿಗಳಾಗಿರುವ ಬಸವರಾಜ ವಾಲ್ಮೀಕಿ ( 40 ವರ್ಷ) ಮತ್ತು ಮಂಜು ಸೋಮನಕಟ್ಟಿ (37 ವರ್ಷ) ಮೃತ ದುರ್ದೈವಿಗಳು. ಮಂಜು ಹಾಗೂ ಬವಸವರಾಜ್ ಹೊನ್ನತ್ತಿ ಮತ್ತು ಕದರಮಂಡಲಗಿ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದು ವಾಪಾಸಾಗುತ್ತಿದ್ದ ಕದಮನಹಳ್ಳಿಯ ಬಳಿಗೆ ಬರುತ್ತಿದ್ದ ವೇಳೆಯಲ್ಲಿ ಬೈಕ್ ಗೆ ಸರಕಾರಿ ವಾಹನ ಢಿಕ್ಕಿಯಾಗಿದೆ.

ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಬೊಲೇರೋ ವಾಹನದಲ್ಲಿ ಹಾವೇರಿಯಿಂದ ರಾಣಿಬೆನ್ನೂರು ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಬೈಕ್ ಗೆ ಢಿಕ್ಕಿಯಾಗಿದೆ. ಈ ಕುರಿತು ಬ್ಯಾಡಗಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದಾರೆ

- Advertisement -

LEAVE A REPLY

Please enter your comment!
Please enter your name here

Most Popular

Recent Comments