2023ರ ವೇಳೆಗೆ ಜೆಡಿಎಸ್ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಮುಂದಿನ ಸಲ ಜೆಡಿಎಸ್ ಏಕಾಂಗಿಯಾಗಿ ಸ್ವರ್ಧೆ ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಅನ್ನು ಯಾವುದೇ ಪಕ್ಷದೊಂದಿಗೆ ವಿಲೀನ ಮಾಡುವ ಅಥವಾ ಬೆಂಬಲಿಸುವ ಉದ್ದೇಶವಿಲ್ಲ. ಸೀಟು ಹೊಂದಾಣಿಕೆ ವಿಚಾರವೂ ನಮ್ಮ ಮುಂದೆ ಇಲ್ಲ. ಜೆಡಿಎಸ್ ನ ಸ್ವಾಭಿಮಾನವನ್ನು ಬೇರೆ ಪಕ್ಷಕ್ಕೆ ಅಡ ಇಡಲು ಸಾಧ್ಯವೇ?ಎಂದಿದ್ದಾರೆ.
ಸಂಕ್ರಾಂತಿ ನಂತರ ಪಕ್ಷದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ತರಲು ನಿರ್ಧಾರ ಮಾಡಿದ್ದೇವೆ. ಆ ಹಿನ್ನೆಲೆಯಲ್ಲಿ ಮೊದಲ ಸಭೆ ನಡೆಸಿದ್ದೇವೆ.ಇವತ್ತಿನಿಂದಲೇ ಜೆಡಿಎಸ್ ಸಂಘಟನೆ ಆರಂಭವಾಗಿದೆ ಎಂದರು.
ನಾನಾಗಲೀ, ನನ್ನ ತಂದೆಯವರಾಗಲಿ ಕಾಂಗ್ರೆಸ್ ಮನೆ ಬಾಗಿಲಿಗೆ ಹೋಗಲಿಲ್ಲ, ದೇವೇಗೌಡರ ಮನೆ ಬಾಗಿಲಿಗೆ ಬಂದಿದ್ದು ಕಾಂಗ್ರೆಸ್. ಪ್ರಧಾನಿ ಪಟ್ಟ ದೇವೇಗೌಡರು ಆಸೆ ಪಟ್ಟಿರಲಿಲ್ಲ, ಕರ್ನಾಟಕ ಬಿಟ್ಟು ಹೋಗುವ ಮನಸ್ಸಿರಲಿಲ್ಲ. ನಾನು ಬಿಜೆಪಿ ಹಾಗೂ ಕಾಂಗ್ರೆಸ್ ಶಾಲಿನ ಬೆಂಬಲ ಪಡೆದೇ, ಎರಡು ಪಕ್ಷಗಳ ಬೆಂಬಲದಿಂದ ಎರಡು ಬಾರಿ ಸಿಎಂ ಆಗಿದ್ದೆ ಆದರೆ ನಾನು ಅವರ ಮನೆಬಾಗಿಲಿಗೆ ಹೋಗಲಿಲ್ಲ ಎಂದಿದ್ದಾರೆ