BREAKING NEWS: ರಾಜ್ಯಕ್ಕೆ ಕಾಲಿಟ್ಟಿದೆ ಯುಕೆ ಸೂಪರ್ ಸ್ಪೀಡ್ ಕೊರೋನಾ ವೈರಸ್

0
586

ಇಡೀ ವಿಶ್ವವನ್ನೇ ಆತಂಕಕ್ಕೀಡು ಮಾಡಿರುವ ಸೂಪರ್ ಸ್ಪೀಡ್ ಕೊರೋನಾ ಇದೀಗ ಬೆಂಗಳೂರಿಗೂ ಲಗ್ಗೆ ಇಟ್ಟಿದೆ. ಬ್ರಿಟನ್ ನಿಂದ ಭಾರತಕ್ಕೆ ಬಂದ ಆರು ಜನರಿಗೆ ಸೂಪರ್ ಸ್ಪೀಡ್ ಕೊರೋನಾ ದೃಢಪಟ್ಟಿದೆ.

ಬ್ರಿಟನ್ ನಿಂದ ಬಂದ ಆರು ಮಂದಿಯಲ್ಲಿ ಮೂವರು ಬೆಂಗಳೂರಿನವರಾಗಿದ್ದು, ಹೈದರಾಬಾದ್ ನ ಇಬ್ಬರು, ಪುಣೆಯ ಒಬ್ಬರಿಗೆ ಕೊರೋನಾ ದೃಢಪಟ್ಟಿದೆ.

ಬ್ರಿಟನ್ ನಿಂದ ಬಂದ 6 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿತ್ತು. ಬಳಿಕ ಬೆಂಗಳೂರಿನ ಮೂವರ ಸ್ಯಾಂಪಲ್ಸ್ ಗಳನ್ನು ನಿಮ್ಹಾನ್ಸ್ ಗೆ ರವಾನಿಸಲಾಗಿತ್ತು. ಇದೀಗ ಈ ಸ್ಯಾಂಪಲ್ ಗಳಲ್ಲಿ ಸೂಪರ್ ಸ್ಪೀಡ್ ಕೊರೋನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ನಿಮ್ಹಾನ್ಸ್ ನಲ್ಲಿ ನಡೆದ ವಂಶವಾಹಿನಿ ಪರೀಕ್ಷೆಯಿಂದ ಮೂವರಿಗೆ ರೂಪಾಂತರ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ಮೂವರು ಸೋಂಕಿತರನ್ನು ಒಂದೇ ಕೊಠಡಿಯಲ್ಲಿ ಐಸೋಲೇಟ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ

LEAVE A REPLY

Please enter your comment!
Please enter your name here