ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಲಾವಾಯ್ಪೊರಾ ಪ್ರದೇಶದಲ್ಲಿ ಓರ್ವ ಉಗ್ರನ ಹತ್ಯೆಯಾಗಿದೆ.ಭದ್ರತಾಪಡೆಗಳು ಎನ್ಕೌಂಟರ್ ನಡೆಸಿದ್ದು, ಓರ್ವ ಉಗ್ರ ಹತನಾಗಿದ್ದಾನೆ. ಲಾವಾಯ್ಪೊರಾದಲ್ಲಿ ಉಗ್ರರು ಅಡಗಿ ಕುಳಿತಿರುವ ಮಾಹಿತಿ ದೊರಕಿದ್ದು, ಕಳೆದ ರಾತ್ರಿಯಿಂದಲೇ ಕಾರ್ಯಾಚರಣೆ ನಡೆದಿದೆ. ಅಡಗಿ ಕುಳಿತಿದ್ದ ಉಗ್ರನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹತ್ಯೆಯಾದ ಉಗ್ರ ಯಾವ ಸಂಘಟನೆಯವನು ಎಂಬ ಮಾಹಿತಿ ಇನ್ನು ತಿಳಿದುಬಂದಿಲ್ಲ.