ಕರ್ನಾಟಕದಲ್ಲಿ 211 ಶಿಕ್ಷಕರು ಕೊರೊನಾ

0
697

ಡಿಜಿಟಲ್‌ ಡೆಸ್ಕ್:‌ ರಾಜ್ಯದಲ್ಲಿ ಶಾಲಾ ಕಾಲೇಜುಗಳು ಪುನರಾರಂಭಗೊಂಡ ಏಳು ದಿನಗಳಲ್ಲೇ ಕರ್ನಾಟಕದಲ್ಲಿ 211 ಶಿಕ್ಷಕರು ಕೊರೊನಾ ವೈರಸ್ʼಗೆ ತುತ್ತಾಗಿದ್ದಾರೆ. ಬೋಧಕೇತರ ಸಿಬ್ಬಂದಿಯೂ ಪಾಸಿಟಿವ್ ಪರೀಕ್ಷೆ ನಡೆಸಿದ ನಂತರ ಈ ಸಂಖ್ಯೆ 236ಕ್ಕೆ ಏರಿಕೆಯಾಗಿದೆ. ‌ಅಂದ್ಹಾಗೆ, ಶಿಕ್ಷಣ ಸಂಸ್ಥೆಗಳು ಪುನರಾರಂಭಗೊಳ್ಳುವ ಮುನ್ನ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಕಡ್ಡಾಯವಾಗಿ ಕೋವಿಡ್-19 ಪರೀಕ್ಷೆಗೆ ಒಳಗಾಗಬೇಕೆಂದು ಸರ್ಕಾರ ಸೂಚಿಸಿತ್ತು.

ಉತ್ತರ ಕನ್ನಡ ಜಿಲ್ಲೆಯಲ್ಲಿ ಶಿಕ್ಷಕರು, ಬೋಧಕೇತರ ಸಿಬ್ಬಂದಿ ಸೇರಿ 20 ಮಂದಿ ಕೊರೊನಾ ವೈರಸ್ ವಕ್ಕರಿಸಿದ್ರೆ, ಬೆಳಗಾವಿಯಲ್ಲಿ 19 ಶಿಕ್ಷಕರು ಹಾಗೂ ಆರು ಮಂದಿ ಬೋಧಕೇತರ ಸಿಬ್ಬಂದಿಗೆ ಪರೀಕ್ಷೆ ವರದಿ ಪಾಸಿಟಿವ್ ಆಗಿದೆ. ಇನ್ನು ಶಿವಮೊಗ್ಗ, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಒಟ್ಟು 39 ಶಿಕ್ಷಕರು ಸೋಂಕಿಗೆ ತುತ್ತಾಗಿದ್ರೆ, ತುಮಕೂರು, ಮೈಸೂರು, ಚಾಮರಾಜನಗರ, ಗದಗ ಜಿಲ್ಲೆಗಳಲ್ಲಿ ಒಟ್ಟು 45 ಶಿಕ್ಷಕರು ಹಾಗೂ ಇಬ್ಬರು ಬೋಧಕೇತರ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ಈ ಫಲಿತಾಂಶಗಳು ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣವನ್ನ ಉಂಟು ಮಾಡಿದೆ.

ಆದರೆ, ರಾಜ್ಯದ ಮೂರು ಕಡೆಗಳಾದ ಚಿಕ್ಕಬಳ್ಳಾಪುರ, ಬಳ್ಳಾರಿ, ಮಧುಗಿರಿ ಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಪರೀಕ್ಷೆ ನಡೆಸಿದರೂ ಯಾವುದೇ ಸಕಾರಾತ್ಮಕ ವರದಿ ಬಂದಿರ್ಲಿಲ್ಲ. ಕರ್ನಾಟಕದಲ್ಲಿ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳು 9 ತಿಂಗಳ ವಿರಾಮದ ನಂತರ ಜನವರಿ 1ರಂದು ಶಾಲೆಗಳಿಗೆ ವಾಪಸಾಗಿದ್ದರು.

ಶಾಲಾ ಆವರಣದೊಳಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈ ತೊಳೆದುಕೊಳ್ಳುವಂತೆ ಸೂಚಿಸಲಾಗಿದೆ. ಇನ್ನು ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪೋಷಕರ ಒಪ್ಪಿಗೆ ಪತ್ರಗಳನ್ನೂ ಕಡ್ಡಾಯವಾಗಿ ತರಬೇಕೆಂದು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here