ಲವ್ ಮಾಕ್ಟೆಲ್ ಜೋಡಿ ಕಲ್ಯಾಣೋತ್ಸವ….! ಕೆರೆ ಮಧ್ಯೆ ತೆರೆದುಕೊಳ್ಳಲಿದೆ ಮಂಟಪ…!!

0
415

ಸ್ಯಾಂಡಲ್ ವುಡ್ ನಲ್ಲಿ ಲವ್ ಮಾಕ್ಟೆಲ್ ನಂತ ಹೃದಯಸ್ಪರ್ಶಿ ಲವ್ ಸ್ಟೋರಿ ನೀಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಪ್ರೇಮಿಗಳ ದಿನಾಚರಣೆಯಂದು ರಿಯಲ್ ಆಗಿ ಸಪ್ತಪದಿ ತುಳಿತಿದ್ದಾರೆ. ಈಗಾಗಲೇ ಭರದಿಂದ ಮದುವೆ ಸಿದ್ಧತೆ ನಡೆಸಿರೋ ಈ ಜೋಡಿ ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ ಕೂಡ ಮುಗಿಸಿದೆ.

ಮದುವೆಯ ಘೋಷಣೆಯನ್ನು ಡಿಫರೆಂಟಾಗಿ ಮಾಡಿದ್ದ  ಜೋಡಿ ಕಳೆದ 10 ವರ್ಷಗಳಿಂದ ಒಬ್ಬರೊನ್ನಬ್ಬರು ಪ್ರೀತಿಸುತ್ತಿದ್ದರೂ ಅನ್ನೋ ಸಂಗತಿ ಬಯಲಾಗಿದ್ದೇ ಲವ್ ಮಾಕ್ಟೇಲ್ ಚಿತ್ರದ ಸಕ್ಸಸ್ ಪಾರ್ಟಿಯುಲ್ಲಿ.

ಮಿಲನಾ ನಾಗರಾಜ್ ಗೆ ಅವರಿಷ್ಟದ ಥೀಮ್ ನಲ್ಲೇ ಬ್ಯಾಚುಲರ್ ಪಾರ್ಟಿ ನೀಡಿದ ಡಾರ್ಲಿಂಗ್ ಕೃಷ್ಣ ಈಗ ವಿಭಿನ್ನವಾದ ಮದುವೆ ಸೆಟ್ ಅಪ್ ಹಾಕೋಕು ಪ್ಲ್ಯಾನ್ ಮಾಡಿದ್ದಾರಂತೆ. ಫೆ.14 ರಂದು ಮದುವೆಯಾಗಲಿರೋ ಈ ಜೋಡಿ ತುಂಬಿದ ಕೆರೆ ಮಧ್ಯೆ ಮದುವೆ ಸೆಟ್ ಹಾಗೂ ಮಂಟಪ ಹಾಕೋಕೆ ಪ್ಲ್ಯಾನ್ ಮಾಡಿದೆ.

ಒಳ್ಳೆಯ ಸ್ವಿಮ್ಮರ್ ಆಗಿರೋ ಮಿಲನಾ ನಾಗರಾಜ್ ಗೆ ಇಷ್ಟವಾಗೋ ರೀತಿಯಲ್ಲಿ ಮದುವೆ ಸೆಟ್ ಇರಬೇಕು ಅನ್ನೋ ಕಾರಣಕ್ಕೆ ಡಾರ್ಲಿಂಗ್ ಕೃಷ್ಣ  ಈ ಪ್ಲ್ಯಾನ್ ಮಾಡಿದ್ದಾರಂತೆ.  ಫೆ.14 ರ ಬೆಳಗ್ಗೆ ಮದುವೆ ಮುಹೂರ್ತವಿದ್ದು ಸಂಜೆ ಆರತಕ್ಷತೆ ನಡೆಯಲಿದೆ. ಈಗಾಗಲೇ ಕಂಚಿ ಸೇರಿದಂತೆ ಹಲವೆಡೆ ಮದುವೆ ಶಾಪಿಂಗ್ ನಡೆಸಿರೋ ಜೋಡಿ, ಸ್ನೇಹಿತರು,ಆಪ್ತರನ್ನು ಮದುವೆಗೆ ಆಹ್ವಾನಿಸೋ ಕೆಲಸದಲ್ಲಿ ಬ್ಯುಸಿಯಾಗಿದೆ.

ಮದುವೆಯ ದಿನವೇ ಈ ಜೋಡಿಯ ಬಹುನೀರಿಕ್ಷಿತ ಲವ್ ಮಾಕ್ಟೆಲ್-2 ದ ಆಡುಗಳ ಆಡಿಯೋ ಲಾಂಚ್ ಆಗಲಿದ್ದು, ಮದುವೆ ಮನೆಯಲ್ಲಿ  ಚಿತ್ರದ ಹಾಡುಗಳ ವಿಡಿಯೋ ಪ್ಲೇ ಮಾಡೋ ಪ್ಲ್ಯಾನ್ ನಲ್ಲಿದ್ದಾರೆ ಡಾರ್ಲಿಂಗ್ ಕೃಷ್ಣ.

LEAVE A REPLY

Please enter your comment!
Please enter your name here